ಸುಳ್ಯ ತಾಲೂಕಿಗೆ 60 ವರ್ಷದ ಸಂಭ್ರ‌ಮ,ಜ.21ಕ್ಕೆ ಷಷ್ಟ್ಯಬ್ಧ ಕಾರ್ಯಕ್ರಮ ಆಚರಣೆ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಕಳೆದಿದ್ದು 1965 ಡಿಸೆಂಬರ್ 17 ರಂದು ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪರವರು ಸುಳ್ಯಕ್ಕೆ ಬಂದು ತಾಲೂಕನ್ನುಉದ್ಘಾಟಿಸಿದ್ದರು.ತಾಲೂಕು 60 ವರ್ಷ ಪೂರೈಸುವ ಈ ಸಂದರ್ಭದಲ್ಲಿ ತಾಲೂಕಿನ ಷಷ್ಟ್ಯಬ್ಧ ಆಚರಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಜ.21ರಂದು ಆಯೋಜಿಸಲಾಗಿರುವ ಷಷ್ಟ್ಯಬ್ಧ ಕಾರ್ಯಕ್ರಮವನ್ನು ಪಕ್ಷಭೇದ ಮರೆತು ಎಲ್ಲರೂ ಸೇರಿ ಯಶಸ್ವಿ ಮಾಡಬೇಕು ” ಎಂದು ಷಷ್ಟ್ಯಬ್ಧ ಆಚರಣಾ ಸಮಿತಿ ಅಧ್ಯಕ್ಷರಾದ ಶಾಸಕಿ ಕು.ಭಾಗೀರಥಿ ಮುರುಳ್ಯ ಕೇಳಿಕೊಂಡಿದ್ದಾರೆ.
ಸುಳ್ಯದ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಲ್ಲಿ ಮಾತನಾಡಿದರು.
ಜ 21 ರಂದು ಬೆಳಿಗ್ಗೆ 9 ಗಂಟೆಗೆ ಸುಳ್ಯದ ಶಾಸ್ತ್ರಿ ಸರ್ಕಲ್‌ನಿಂದ ಪರಿವಾರಕಾನದಲ್ಲಿರುವ ಶ್ರೀ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಂಗಣದ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.
ತಾಲೂಕಿನ ಸರಕಾರಿ ಇಲಾಖೆಗಳವರು, ಗ್ರಾಮ ಪಂಚಾಯತ್ ನವರು, ಸಹಕಾರ ಸಂಘಗಳವರು, ಕಾಲೇಜು ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳವರು, ಸಂಘಸಂಸ್ಥೆಯವರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಮೆರವಣಿಗೆಯ ಬಳಿಕ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಸುಳ್ಯ ತಾಲೂಕಿನ ಜನರು‌ ಈ ಕಾರ್ಯಕ್ರಮದಲ್ಲಿ ಭಾಗವಹಿಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು‌ ವಿನಂತಿಸಿಕೊಂಡರು.
ಷಷ್ಟ್ಯಬ್ಧ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಎನ್ ಮನ್ಮಥ ಮಾತನಾಡಿ ಸಭಾ ಕಾರ್ಯಕ್ರಮದಲ್ಲಿ ‘ಸುಳ್ಯ ಅಂದು, ಸುಳ್ಯ ಇಂದು ಮತ್ತು ಸುಳ್ಯ ಮುಂದು ‘ ಎಂಬ ವಿಷಯದ ಬಗ್ಗೆ ಎಂ.ಬಿ.ಸದಾಶಿವ, ಭರತ್ ಮುಂಡೋಡಿ ಮತ್ತು ಸಂತೋಷ್ ಕುತ್ತಮೊಟ್ಟೆಯವರಿಂದ ವಿಚಾರ ಮಂಡನೆ ನಡೆಯುವುದು. ಸುಳ್ಯ ತಾಲೂಕು ರಚನೆಗೆ ಪ್ರಯತ್ನಿಸಿದ್ದ ಮಹನೀಯರನ್ನು ಸ್ಮರಿಸುವುದಲ್ಲದೆ, ಅವರ ಮನೆಯವರನ್ನು ಗುರುತಿಸಲಾಗುವುದು. ಸುಳ್ಯ ಕ್ಷೇತ್ರವನ್ನು ಸಂಸತ್ತಿನಲ್ಲಿ ಮತ್ತು ವಿಧಾನ ಮಂಡಲದಲ್ಲಿ ಪ್ರತಿನಿಧಿಸಿದ ಮಾಜಿ ಸಂಸದರುಗಳಾದ ಬಿ.ಜನಾರ್ದನ ಪೂಜಾರಿ, ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರುಗಳಾದ ಕೆ.ಕುಶಲ, ಎಸ್.ಅಂಗಾರ, ಅಣ್ಣಾ ವಿನಯಚಂದ್ರರನ್ನು ಗೌರವಿಸಲಾಗುವುದು. ಸುಳ್ಯದ ಭವ್ಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಡಾ.ಕುರುಂಜಿ ವೆಂಕಟರಮಣ ಗೌಡರನ್ನು ವಿಶೇಷವಾಗಿ ಸ್ಮರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಸಂಚಾಲ ಹರೀಶ್ ಕಂಜಿಪಿಲಿ, ಸಮಿತಿಯ ಉಪಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್ , ಸಂಚಾಲಕ ರಾಧಾಕೃಷ್ಣ ಬೊಳ್ಳೂರ,ಸಂಘಟನಾ ಕಾರ್ಯದರ್ಶಿ ಕೆ.ಎಂ.ಮಸ್ತಫ, ಉಪಾಧ್ಯಕ್ಷ ಸದಾನಂದ ಮಾವಜಿ, ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ, ಸಹಸಂಚಾಲಕ ಸಂತೋಷ್ ಕುತ್ತಮೊಟ್ಟೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top