ತೊಡಿಕಾನ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ

ಸುಳ್ಯ ತಾಲೂಕಿನ ತೊಡಿಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಸಿರು ಕಾನನದ ಮಧ್ಯೆ ಕಂಗೊಳಿಸುತ್ತಿದೆ.
ಶಾಲೆಗೆ ಇದೀಗ 75 ವರುಷದ ಸಂಭ್ರಮ.ಅನೇಕರ ಬಾಳನ್ನು ಬೆಳಗಿದ ವಿದ್ಯಾದೇಗುಲದ ಅಮೃತ ಸಂಭ್ರಮವನ್ನು ಅರ್ಥಪೂರ್ಣ ವಾಗಿ ಆಚರಿಸಲು ಶಾಲೆಯ ಊರವರು ಸೇರಿಕೊಂಡು ಅಮೃತಮಹೋತ್ಸವ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ಇದೇ ಜನವರಿ ಜ.22ರಂದು ಶಾಲೆಯಲ್ಲಿ ಅಮೃತ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.
ತೊಡಿಕಾನ ಎಂಬುದು ಕಾನನಗಳ ಮಧ್ಯೆ ಸೀಮಿತ ಸಂಖ್ಯೆಯ ಮನೆಗಳು, ಎಲ್ಲಿ ನೋಡಿದರೂ ದಟ್ಟಾರಣ್ಯ. ಸೀಮೆ ದೇವಸ್ಥಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬರಲು ಕಚ್ಚಾ ಮಣ್ಣಿನ ರಸ್ತೆ, ಮಾತ್ರ. ಇಲ್ಲಿನ ಮಕ್ಕಳು ವಿದ್ಯಾಭ್ಯಾಸ. ಪಡೆಯಲು ಅರಂತೋಡು ಅಥವಾ ದೂರದ ಸುಳ್ಯಕ್ಕೆ ಹೋಗಬೇಕಿತ್ತು. ಈಗಿನಂತೆ ವಾಹನದ ವ್ಯವಸ್ಥೆ ಇಲ್ಲದ ಆ ಕಾಲದಲ್ಲಿ ದಿನಂಪ್ರತಿ ಶಾಲೆಗೆ ಹೋಗಿಬರಲು ಕಷ್ಟ ಸಾಧ್ಯವಾದರಿಂದ ಇಲ್ಲೇ ಶಾಲೆ ಯೊಂದನ್ನು ಆರಂಭಿಸಲು ಇಲ್ಲಿನ ಹಿರಿಯರು ಯೋಚಿಸಿದರು.
ಆ ಕಾಲದ ಹಿರಿಯರ ಪ್ರಯತ್ನದ ಫಲವಾಗಿ ಶಾಲೆ ಪ್ರಾರಂಭಿಸಲು ಹಸಿರು ನಿಶಾನೆ ಕೂಡ ಸಿಕ್ಕಿತು. ಆದರೆ ಕಟ್ಟಡದ ವ್ಯವಸ್ಥೆ ಇರದ ಕಾರಣ ಆರಂಭದ ಕೆಲಸಮಯ ಅಂದರೆ 1943 ರ ಒಂದು ವರ್ಷ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೋಗಿಪುರ ಕಟ್ಟಡದಲ್ಲಿ ಶಾಲಾ ತರಗತಿಗಳು ಆರಂಭಗೊಂಡಿತು. ಆಗ ಶಿಕ್ಷಕರಾಗಿ ಚಿನ್ನಪ್ಪ ಮಾಸ್ಟರ್ ಚೆಂಡಡ್ಕ ವಿದ್ಯಾಭ್ಯಾಸ ನೀಡಿದರು. ಶಾಲೆಗೆ ಸ್ವಂತ ಕಟ್ಟಡ ಇರಬೇಕು ಎಂದು ಆಲೋಚಿಸಿ‌ ಆ ಕಾಲದಲ್ಲಿ ಇಲ್ಲಿನ ಹಿರಿಯರು, ಮುಖ್ಯಸ್ಥರಾಗಿದ್ದ ಹೂವಯ್ಯ ಗೌಡ ಕುತ್ತಮೊಟ್ಟೆ ಅವರು 2.43 ಏಕ್ರೆ ಜಾಗವನ್ನು ಶಾಲೆ ಆರಂಭಿಸಲು ಬಿಟ್ಟುಕೊಟ್ಟರು. ಬಳಿಕ ಈಗ ಶಾಲೆ ಇರುವ ಜಾಗದ ಒಂದು ಬದಿಯಲ್ಲಿ ಮರದ ಕಂಬ ಹಾಕಿ ಮುಳಿ ಹುಲ್ಲಿನಿಂದ ಕಟ್ಟಡ ಮಾಡಿ ಅದರಲ್ಲಿ ಶಾಲೆ ಆರಂಭಗೊಂಡಿತು . ಶಾಲೆಯಲ್ಲಿ ಊರ ಹಿರಿಯರ ಸಹಕಾರದಲ್ಲಿ
ಸಹಕಾರದಲ್ಲಿ ಬಾಬಣ್ಣ ಮಾಸ್ಟರ್ ಆ ಬಳಿಕ ನಾರಾಯಣ ರೈ ಎಂಬವರು ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟರು. ಆಗ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಕೆಲವವೇ ಮಂದಿ ಮಾತ್ರ. ಕೆಲ ಸಮಯಗಳ ಬಳಿಕ ಶಾಲೆ ಅಧಿಕೃತವಾಗಿ ಸರಕಾರದಿಂದ ನಡೆಸಲ್ಪಟ್ಟು ಒಂದರಿಂದ ಐದನೇ ತರಗತಿ ತನಕ ಕಿರಿಯ ಪ್ರಾಥಮಿಕ ಶಾಲೆಯಾಗಿ 1950ರಲ್ಲಿ ಸರ್ಕಾರದ ವತಿಯಿಂದಲೇ ಹೊಸ ಕಟ್ಟಡ ನಿರ್ಮಾಣವಾಯಿತು.
ಶಾಲೆ ಅಧಿಕೃತವಾಗಿ ಆರಂಭಗೊಂಡ ಬಳಿಕ ಶಾಲೆಗೆ
ಏಕೋಪಾಧ್ಯಾಯರಾಗಿ ನೇಮಕಗೊಂಡು ಬಂದವರು ಕಲ್ಲುಗದ್ದೆ ಶೇಷಪ್ಪ ಮಾಸ್ತ‌ರ್ ಎಂಬವರು. ಇವರು ಆರಂತೋಡಿನಿಂದ ನಡೆದು ಕೊಂಡು ಬಂದು ಇಲ್ಲಿ ಪಾಠ ಮಾಡುತ್ತಿದ್ದರು. ಶೇಷಪ್ಪ ಮಾಸ್ತರರು 2 ದಶಕಷ್ಟು ವರ್ಷ ಇಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಅವರ ಜೊತೆಗೆ ಜಾನಕಿ ಎಂಬವರು ಶಿಕ್ಷಕಿಯಾಗಿದ್ದು, ಇವರು ಸುಳ್ಯದಿಂದ ತೊಡಿಕಾನಕ್ಕೆ ನಡೆದುಕೊಂಡೇ ಬಂದು ಪಾಠ ಹೇಳಿ ಕೊಡುತ್ತಿದ್ದರು.- ಬಳಿಕ ಹಂತ ಹಂತವಾಗಿ ಶಾಲೆ ಪ್ರಗತಿಯನ್ನು ಹೊಂದಿ 1970ರ ವೇಳೆಗೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೆ ಹೊಂದಿತು. ಇದೇ ಸಂದರ್ಭದಲ್ಲಿ ಶಾಲೆಗೆಂದು ಹೂವಯ್ಯ ಗೌಡ ಕುತ್ತಮೊಟ್ಟೆ ಇವರು ನೀಡಿದ 2.43 ಎಕೆ, ಜಾಗ ಶಾಲೆಯ ಹೆಸರಿಗೆ ಆರ್ ಟಿ ಸಿ ಆಯ್ತು.
ಹಲವು ಮಂದಿ ಮುಖ್ಯ ಶಿಕ್ಷಕರುಗಳು, ಸಹ ಶಿಕ್ಷಕರುಗಳು ಶಾಲೆಯಲ್ಲಿ ವಿದ್ಯಾಭ್ಯಾಸ ನೀಡಿ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕು ನೀಡಿದರು.
ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ರಾಜ್ಯ, ದೇಶ,ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.ಇದು ಶಾಲೆಗೆ ಹೆಮ್ಮೆಯ ವಿಷಯವಾಗಿದೆ. ಶಾಲೆಯ ವಿದ್ಯಾರ್ಥಿನಿಯಾಗಿದ್ದ ಪೂಜಾ ಮುತ್ತುಕೋಡಿ ಇನ್ ಸ್ಪಯರ್ ಅವಾರ್ಡಿನಲ್ಲಿ ರಾಷ್ಟ್ರ ಮಟ್ಟಕ್ಕೂ, ಅನನ್ಯ ಅಡ್ಯಡ್ಕ,ರಾಜ್ಯ ಮಟ್ಟದಲ್ಲೂ ಪ್ರತಿನಿಧಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈಗಿನ ವಿದ್ಯಾರ್ಥಿನಿ ತುಷಿತ ಎನ್ ಪ್ರತಿಭಾ ಕಾರಂಜಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ಹಲವು ಮಂದಿ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆ ಇದೆ. 2007ರ ವರ್ಷದಲ್ಲಿ ಶಾಲೆ ಉನ್ನತಿರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೆ ಭಡ್ತಿಯಾಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋದರೂ ಇಲ್ಲಿ ಮಾತ್ರ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದೆ. ಪ್ರಸ್ತುತ 78 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಪಾಜೆ ಕ್ಲಸ್ಟರ್ ಮಟ್ಟಿದಲ್ಲೂ ಶಾಲೆಗೆ ಒಳ್ಳೆಯ ಹೆಸರಿದೆ.ಇದಕ್ಕೆ ಇಲ್ಲಿನ ಮುಖ್ಯ ಶಿಕ್ಷಕರು. ಸಹಶಿಕ್ಷಕರ
ಶ್ರಮವೂ ದೊಡ್ಡದಿದೆ. ಪ್ರಸ್ತುತ ಶಾಲೆಯಲ್ಲಿ ಬಮತೇಶ ಸೌಲಭ್ಯಗಳು ಲಭ್ಯವಿದೆ. ಬೇಕಾದಷ್ಟು ಶಾಲೆಯ ಕೊಠಡಿಗಳಿವೆ. ಅಡುಗೆ ಕೋಣೆ, ಜಾನಕಿ ಕುರುಂಜಿ ವೆಂಕಟ್ರಮಣ ಗೌಡ ರಂಗಮಂದಿರ, ವಿಶಾಲವಾದ ಕ್ರೀಡಾಂಗಣ, ಸುತ್ತ ಅವರಣ ಗೋಡೆ, ಗೋದಾಮು,ಶೌಚಾಲಯ ವಿಶೇಷ ಶೌಚಾಲಯ, ಕೈತೋಟ, ಸ್ಮಾರ್ಟ್ ರೂಮ್, ಅಡಿಕೆ – ತೆಂಗಿನ ಮರಗಳಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಗಾಗಿ ಶಾಲೆಗೆ ಕಂಪ್ಯೂಟರ್ ಹಾಗೂ ಕೊಠಡಿದು ಅವಶ್ಯಕತೆ ಇದೆ.
ಶಾಲೆಯಲ್ಲಿ ಪ್ರಸ್ತುತ ಕ್ರಿಯಾಶೀಲ ಚಟುವಟಿಕೆಯ ಮುಖ್ಯ ಶಿಕ್ಷಕರಾಗಿ ಅರುಣ್ ಕುಮಾರ್ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಮೃತ ಮಹೋತ್ಸವದ ಸಂಪೂರ್ಣ ಕೆಲಸ ಕಾರ್ಯಗಳಲ್ಲಿ ಬೆನ್ನೆಬು ಆಗಿ ಊರವರೊಂದಿಗೆ ಅನ್ಯೋನ್ಯವಾಗಿ ಬೆರೆತು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತಿರುವ ಸಹಶಿಕ್ಷಕರಾಗಿ ಬಲರಾಜ್ ಕಲ್ಲುಮುಟ್ಲು , ಸ್ನೇಹಲತಾ, ಮಮತಾ, ಗೌರವ ಶಿಕ್ಷಕರಾಗಿ ನಾಗವೇಣಿ, ಕು. ವಿದ್ಯಾ ಸೇವೆ ಸಲ್ಲಿಸುತ್ತಿದ್ದಾರೆ.
ಶಾಲೆಯನ್ನು ಸುಣ್ಣ-ಬಣ್ಣಗಳಿಂದ ಶೃಂಗರಿಸಲಾಗಿದ್ದು, ಹಳೆವಿದ್ಯಾರ್ಥಿಗಳು, ಊರವರ ಸಹಕಾರದಲ್ಲಿ ಅದ್ಭುತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಜ್ಜುಗೊಳಿಸಲಾಗಿದೆ. ಈಗಾಗಲೇ ಕ್ರೀಡಾ ಕೂಟ ಯಶಸ್ವಿಯಾಗಿ ನಡೆಸಿದ್ದೇವೆ. ಹಿರಿಯ ನಾಗರೀಕರಿಗೆ ಸ್ಪರ್ಧೆಗಳು, ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ-ಮಾತುಕತೆ, ಗುರುವಂದನೆ, ಸೇವೆ ಸಲ್ಲಿಸಿದ ಹಾಗೂ ಈಗ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ, ಸಂಸದರು, ಶಾಸಕರ ಉಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ, ಹಳೆ ವಿದ್ಯಾರ್ಥಿಗಳಿಂದ, ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಅಮ್ರತ ಮಹೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ತಿಳಿಸಿದ್ದಾರೆ. ಹಲವು ಅಭಿವ್ರದ್ದಿ ಕೆಲಸಗಳಿಗೆ ಚಾಲನೆ ನೀಡಲಾಗಿದ್ದು ಅವುಗಳು ಅಂತಿಮ ಹಂತದಲ್ಲಿದೆ.
ಅಮೃತ ಸಂಭ್ರಮದಲ್ಲಿ ಸುಮರು 15 ಲಕ್ಷದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ. ಶಾಸಕಿ ಅನುದಾನದಲ್ಲಿ ಶಾಲಾ ಸಭಾಂಗಣ, ಗ್ರಾಮ ಪಂಚಾಯತ್ ಅನುದಾನದಲ್ಲಿ ఇంಟರ್ ಲಾಕ್,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಮುತುವರ್ಜಿಯಲ್ಲಿ ಮಾಡಿದ ಕೈ ತೊಳೆಯುವ ಘಟಕ, ಪೋಷಕರಾದ ನಾಗರಾಜ್ ಚಾಂಬಾಡಿ ನೀಡಿದ ತ್ರೊಬಾಲ್ ಅಂಗಣ ಉದ್ಘಾಟನೆ.ಪ್ರೇಮ ವಸಂತ ಭಟ್ ನೀಡಿದ ಯು.ಪಿ.ಎಸ್,ಸಿಸ್ಟಮ್ ತೆಂಗಿನ ಕಾಯಿ ಹೆರೆಯುವ ಯಂತ್ರ ಹಸ್ತಾಂತರ ನಡೆಯಲಿದೆ‌.
ಇನ್ನೋರ್ವ ಸಹಶಿಕ್ಷಕಿ ಸುನೀತಾ ನಿಯೋಜನೆ ಮೇರೆಗೆ ಪಕ್ಕದ ಜಿಪ್ತಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಖ್ಯ ಆಡುಗೆಯವರಾಗಿ ಸತ್ಯವತಿ ಬಾಳೆಹಿತ್ತು, ಸಹಾಯಕಿಯಾಗಿ ಮಾಲಿನಿ ಇವರು ಕೆಲಸ ಮಾಡುತ್ತಿದ್ದಾರೆ. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ನವೀನ್ ಎ. ಬಿ ಅಮೆಮನೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದೀಪಕ್ ಕುತ್ತಮೊಟ್ಟೆ ಯವರಿದ್ದಾರೆ. ಮೊದಲ ಬ್ಯಾಚ್ ನ ವಿದ್ಯಾರ್ಥಿಗನ್ನು ಸಮಾರಂಭದಲ್ಲಿ ಸನ್ಮಾನಿಸಲಾವುವುದು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top