ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ ಅಸೌಖ್ಯದಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಜ.20ರಂದು ನಿಧನರಾದರು.
ಅವರಿಗೆ ಸುಮಾರು 36 ವರ್ಷ ವಯಸ್ಸಾಗಿತ್ತು.ಬಳ್ಳಡ್ಲ ದಿ.ದುಗ್ಗಪ್ಪ ಗೌಡ – ಶ್ ಇಂದಿರಾ ದಂಪತಿಯ ಪುತ್ರರಾಗಿದ್ದ ಅನಿಲ್ ಗ್ರಾ.ಪಂ. ಸದಸ್ಯರಾಗಿ ಜನ ಸೇವೆ ಮಾಡುತ್ತಿದ್ದರು. ಆದರೆ ಕಳೆದ ಕೆಲ ಸಮಯದಿಂದ ಅವರು ಅಸೌಖ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ತಾಯಿ ಇಂದಿರಾ , ಪತ್ನಿಕಾವ್ಯ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ ನಿಧನ



































