ಭಾರತ ಸರಕಾರದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ ಐವರ್ನಾಡು ಗ್ರಾಮಗಳ ಅರ್ಹ ಪಲಾನುಭವಿಗಳಿಗೆ ಕೃಷಿ ಸವಲತ್ತುಗಳ ವಿತರಣ ಕಾರ್ಯಕ್ರಮವು ಜ.19ರಂದು ಸುಳ್ಯ ತಾಲೂಕು ಪಂಚಾಯತ್ ವಠಾರದಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಸವಲತ್ತುಗಳನ್ನು ವಿತರಿಸಿ ಶುಭ ಹಾರೈಸಿದರು.
ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋ ಪ್ರಾದೇಶಿಕ ಕೇಂದ್ರ ತ್ರಿಶೂರ್ ಹಾಗೂ ದ.ಕ. ಕೃಷಿ ವಿಜ್ಞಾನ ಕೇಂದ್ರದ ಮೂಲಕ ಈ ಸವಲತ್ತುಗಳ ವಿತರಣೆ ನಡೆಯಿತು.
ಅಧಿಕ ಪರಿಶಿಷ್ಟ ಜಾತಿ ಕೃಷಿಕರಿರುವ ಪ್ರದೇಶಗಳ ಫಲಾನುವಿಗಳಿಗೆ ಈ ಸಲಕರಣೆಗಳನ್ನು ಯೋಜನೆಯ ಮೂಲಕ ನೀಡಲಾಗುತ್ತಿದ್ದು, ಸಂಪಾಜೆ, ಅಲೆಟ್ಟಿ ಐವರ್ನಾಡು ಗ್ರಾಮಗಳ ಕೃಷಿತರನ್ನು ಕೃಷಿ ಸಖಿ ಹಾಗೂ ಸಂಜೀವಿನಿಯವರ ಮೂಲಕ ಆಯ್ಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಕೆ.ವಿ.ಕೆ ಮಂಗಳೂರಿನ ಹಿರಿಯ ವಿಜ್ಞಾನಿ ಡಾ.ರಮೇಶ್ ಎಂ.ಆರ್.ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ
ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ ಇತರರು ಉಪಸ್ಥಿತರಿದ್ದರು.
ಭಾರತ ಸರ್ಕಾರದ ಪರಿಶಿಷ್ಟಜಾತಿ ಉಪಯೋಜನೆಯಡಿ ಪಲಾನುಭವಿಗಳಿಗೆ ಸವಲತ್ತು ವಿತರಣೆ

















