ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧ ಮುಖ್ಯ : ಒಲ್ಡಿನ್ ಡಿ.ಕುನ್ಹಾ

ಸಮಾಜದಲ್ಲಿ ಜನರಿಗೆ ಹಣ ಮುಖ್ಯವಲ್ಲ ಸಂಬಂಧ ಮುಖ್ಯ ಈ ನಿಟ್ಟಿನಲ್ಲಿ ತಾನು ಕಲಿತ ಶಿಕ್ಷಣ ಸಂಸ್ಥೆಯೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಬಂಧ ಇರಿಸಿಕೊಳ್ಳಬೇಕೆಂದು ಸೈಂಟ್ ಬ್ರಿಜಿಟ್ಸ್ ಶಾಲೆಯ ಜೊತೆ ಕಾರ್ಯದರ್ಶಿ ಪೂಜ್ಯನೀಯ ಒಲ್ಡಿನ್ ಡಿ.ಕುನ್ಹಾ ಹೇಳಿದರು.
ಅವರು ಸುಳ್ಯ ಬೀರಮಂಗಲದಲ್ಲಿರುವ
ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ‌ಸುಳ್ಯ ಇದರ ಅಮೃತ ಮಹೋತ್ಸವ ಅಂಗವಾಗಿ ಜ.20ರಂದು ಶಾಲಾ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ವಿದ್ಯಾರ್ಥಿ ಎಸ್.ಎಂ ಬಾಪೂ ಸಾಹೇಬ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಈ ಶಾಲೆಯಲ್ಲಿ ಶಿಕ್ಷಣ ಪಡೆದಿರುವುದು ನನ್ನ ಪಾಲಿನ ಭಾಗ್ಯ.ಇಲ್ಲಿಯ ಶಿಕ್ಷಕರನ್ನು ನನ್ನ ಬಾಳಿನಲ್ಲಿ ಮರೆಯಲು ಅಸಾಧ್ಯ ಎಂದು ಹೇಳಿದರು.ಹಿರಿಯ ವಿದ್ಯಾರ್ಥಿ ಹಾಗೂ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ,ಶಿಕ್ಷಕಿ ಹಾಗೂ ಹಿರಿಯ ವಿದ್ಯಾರ್ಥಿ ಶಹನಾಝ್,ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕ,ಹಿರಿಯ ವಿದ್ಯಾರ್ಥಿ ಯಶ್ವಿತ್ ಕಾಳಮನೆ,ಹಿರಿಯ ವಿದ್ಯಾರ್ಥಿ ಡಾ.ಸುನಿಧಿ ಎಸ್,ಸಂಗೀತ ನಿರ್ದೇಶಕ ಹಾಗೂ ಚಲನ ಚಿತ್ರ ನಿರ್ದೆಶಕ ಮಯೂರ್ ಅಂಬೆಕಲ್ಲು ಸಮ್ಮಿನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅಮ್ರತ ಮಹೋತ್ಸವ ಸಮಿತಿ ಅಧ್ಯಕ್ಷ ನವೀನ್ ಮಚಾದೊ,ಉಪಾಧ್ಯಕ್ಷ ನವೀನ್ ಚಂದ್ರ ಚಾತುಬಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ
ಸಿಸ್ಟರ್ ಆ್ಯಂಟನಿ ಮೇರಿ ಸ್ವಾಗತಿಸಿದರು.ಶಿಕ್ಷಕಿಯರಾದ ದೀಪಿಕಾ ಮತ್ತು ವಲ್ಸಾ ಟೀಚರ್ ಕಾರ್ಯಕ್ರಮ‌ ನಿರೂಪಿಸಿದರು.ಸಮಾರಂಭಕ್ಕೂ ಮುನ್ನಾ 75 ವಿದ್ಯಾರ್ಥಿಗಳಿಂದ ದೀಪಾರ್ಚನೆ ನಡೆಯಿತು.ಸ್ವಾಗತ ನ್ಯತ್ಯ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top