ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ : ವೈಭವದ ಮೆರವಣಿಗೆ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ ಜ.21ರಂದುಬ ನಡೆಯಿತು.
ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ವಿವಿಧ ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ನವರು ಸೇರಿ ಸಾವಿರಾರು ಮಂದಿಯ ಕೂಡುವಿಕೆಯೊಂದಿಗೆ ಬೃಹತ್ ಮೆರವಣಿಗೆ ಸುಳ್ಯನಗರದಲ್ಲಿ ನಡೆಯಿತು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ ಮೆರವಣಿಗೆಗೆ ಚಾಲನೆ ನೀಡಿದರು. ನಮ್ಮ ತಾಲೂಕು ಆಗುವಲ್ಲಿ ನಮ್ಮಕೆ.ವಿಜಿ ನಮ್ಮ‌ ತಂದೆ ಮುಂಚೂಣಿಯಲ್ಲಿದ್ದರು. ಜತೆಗೆ ಹಲವರು ಶ್ರಮಿಸಿದ್ದಾರೆ. ಆ ಎಲ್ಲ ವ್ಯಕ್ತಿಗಳನ್ನು ನಾವು ಸ್ಮರಿಸಿಕೊಳ್ಳಬೇಕು. ಸುಳ್ಯ ತಾಲೂಕು ರಚನೆಯ ಆದುದರಿಂದ ಸುಳ್ಯ ಅಭಿವೃದ್ಧಿ ಯಾಗುತ್ತಾ ಬಂದಿದೆ. ತಾಲೂಕಿಗೆ 60ರ ಈ ಸಮಯದಲ್ಲಿ ದೊಡ್ಡ ಯೋಜನೆಯೊಂದು ಸುಳ್ಯಕ್ಕೆ ಬಂದು ಸಾವಿರ ಮಂದಿಗೆ ನೌಕರಿ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಪ್ರಯತ್ನ ಪಡಬೇಕು” ಎಂದು ಅವರು ಹೇಳಿದರು.
ಷಷ್ಟ್ಯಬ್ಧ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಎನ್.ಮನ್ಮಥ, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್‌, ಕೋಶಾಧಿಕಾರಿ ಜಾಕೆ ಸಂತೋಷ್, ಸಂಪಾದಕರಾದ ಕೆ.ಆ‌ರ್.ಗಂಗಾಧ‌ರ್, ಸಂಚಾಲಕರುಗಳಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ಸಹ ಸಂಚಾಲಕರುಗಳಾದ ಸಂತೋಷ್ ಕುತ್ತಮೊಟ್ಟೆ, ಡಾ.ನಿತೀನ್ ಪ್ರಭು, ಉಪಾಧ್ಯಕ್ಷರುಗಳಾದ ಟಿ.ಎಂ.ಶಹೀದ್, ಸದಾನಂದ ಮಾವಜಿ, ತಹಶೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ, ಪಿ.ಸಿ.ಜಯರಾಮ್, ಜಾನ್ ವಿಲಿಯಂ ಲಸ್ರಾದೋ, ಕಾರ್ಯದರ್ಶಿಗಳಾದ ದಿನೇಶ್ ಮಡಪ್ಪಾಡಿ, ಪಿ.ಎಸ್.ಗಂಗಾಧ‌ರ್, ಸಂಘಟನಾ ಕಾರ್ಯದರ್ಶಿಗಳಾದ ವೆಂಕಟ್ ದಂಬೆಕೋಡಿ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಕೆ.ಎಂ. ಮುಸ್ತಫಾ ಸೇರಿದಂತೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು – ಸದಸ್ಯರುಗಳು, ಕೆ.ವಿ.ಜಿ. ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ಕೇರಳದ ಚಂಡೆ, 60ರ ನೆನಪಿಗಾಗಿ ಟ್ಯಾಬ್ಲೊ, ಗೊಂಬೆಗಳಕುಣಿತ ಆಕರ್ಷಣಿಯವಾಗಿತ್ತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top