ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು ಎಂದು ಆರ್.ಎಸ್.ಎಸ್ ದಕ್ಷಿಣ ಪ್ರಾಂತ ಭೌದ್ದಿಕ್ ಪ್ರಮುಖ್ ರಾಜೇಶ್ ದೇವರಕಾನ ಹೇಳಿದರು.
ಹಿಂದೂ ಸಂಗಮ ಅರoತೋಡು ಮಂಡಲ, ಪೆರಾಜೆ, ಅರಂತೋಡು, ತೊಡಿಕಾನ ಗ್ರಾಮದ ವತಿಯಿಂದ ಪೆರಾಜೆ ಜ್ಯೋತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಜಿ ಭಾಷಣ ಮಾಡಿದರು.
ಭಾರತ ದೇಶ ಪುರಾಣ ಮತ್ತು ವಿಜ್ಞಾನಗಳ ಸತ್ವದೊಂದಿಗೆ ಪ್ರಾಚೀನ ರಾಷ್ಟ್ರವಾಗಿದೆ.ನಮ್ಮ ದೇಶದ ಪರಂಪರೆ ಹಲವು ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದೆ.ರಾಷ್ಟ್ರೀಯ ಪ್ರಜ್ಞೆಗಳನ್ನು ಮೂಡಿಸಲು ವ್ಯಕ್ತಿಯಲ್ಲಿ ರಾಷ್ಟ್ರೀಯ ವಿಚಾರಗಳನ್ನು ಮೂಡಿಸಬೇಕು.ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಲ್ಪನೆಯನ್ನು ಡಾಕ್ಟರ್ ಜೀ.ರವರು ಮಾಡಿದರು.ಅದರ ಸ್ವರೂಪವೇ ಈಗಿನ ಹಿಂದೂ ಸಮಾಜ ಎಂದು ಹೇಳಿದ ಅವರು ಧರ್ಮ ಎಂದರೆ ನಮ್ಮ ನಡವಳಿಕೆ- ಅದುವೇ ಹಿಂದುತ್ವ.ಹಿಂದೂ ರಾಷ್ಟ್ರದ ಸರ್ವಾಂಗೀಣ ಉನ್ನತಿಯಾಗಬೇಕು ಎಂದು ಹೇಳಿದರು.
ಪೆರಾಜೆ ಜ್ಯೋತಿ ಪ್ರೌಢಶಾಲೆಯ ತನಕ ಮೆರವಣಿಗೆ ಬಂದು ನಂತರ ಸಭಾ ಕಾರ್ಯಕ್ರಮ ನಡೆಯಿತು.
ತಿಮ್ಮ ಕೊಡ್ಯಗುಂಡಿ ಮತ್ತು ವಿಶ್ವಹಿಂದೂ ಪರಿಷತ್ ಮುಖಂಡ ಸೋಮಶೇಖರ ಪೈಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ವೇಷಭೂಷಣಗಳು, ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಟಾಸೆ,ವಾದ್ಯಗಳು ಆಕರ್ಷಣೆಯಾಗಿದ್ದವು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಲೀಲಾ ದಾಮೋದರ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪೆರಾಜೆ ಶಾಸ್ತಾವು ದೇವಸ್ಥಾನದ ಆಡಳಿತ ಮೊಕೇಸರ ಎನ್. ಎ. ಜಿತೇಂದ್ರ, ಅರಂತೋಡು ಮಂಡಲ ಹಿಂದೂ ಸಂಗಮ ಸಂಚಾಲಕ ಎ.ಸಿ.ವಸಂತ, ಸಹಸಂಚಾಲಕ ತೀರ್ಥರಾಮ ಅಡ್ಕಬಳೆ ವೇದಿಕೆಯಲ್ಲಿದ್ದರು.
ಎ.ಸಿ.ವಸಂತ ಸ್ವಾಗತಿಸಿ, ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಥರಾಮ ಅಡ್ಕಬಳೆ ವಂದಿಸಿದರು.
ಶ್ರೀನಾಥ್ ಪಡುಮಜಲು ಕಾರ್ಯಕ್ರಮ ನಿರೂಪಿಸಿದರು.
ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು : ರಾಜೇಶ್ ದೇವರಕಾನ



































