ತೊಡಿಕಾನ ಮಲ್ಲಿಕಾರ್ಜುನ ದೇವರ ಪಟ್ಟದ ದೈವ -ಸೀಮೆ ದೈವ ರಾಜನ್ ದೈವ ( ಶಿರಾಡಿ ಭೂತ) ಪರಿವಾರ ದೈವಗಳ ಕೋಲ
ಚಾಕಟೆಡಿ ನೇಮ ಜ.26ರಂದು ನಡೆಯಿತು.
ಬೆಳಿಗ್ಗೆ : 5:00 ಗಂಟೆಗೆ
ಮಲೆ ಉಳ್ಳಾಕುಲು ನೇಮ ನಡೆಯಿತು.ಬೆಳಿಗ್ಗೆ 10:00 ಗಂಟೆಯಿಂದ ರಾಜನ್ ದೈವ ( ಶಿರಾಡಿ ಭೂತ) ದ ಕೋಲ ನಡೆದು
ಬಳಿಕ ಬಟ್ಟಿಭೂತ, ಪುರುಷ ಭೂತ, ಕರಿ ಭೂತ, ಮಲೆ ಮುದ್ದ, ಶೆಟ್ಟಿ ಭೂತ ಮತ್ತು ಅಂಗಾರ ದೈವಗಳ ಕೋಲ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು,ಮಾಜಿ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು ನೂರಾರು ಭಕ್ತರು ಉಪಸ್ಥಿತರಿದ್ದು ದೈವಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ತೊಡಿಕಾನ ::ಶ್ರದ್ಧಾ ಭಕ್ತಿಯಿಂದ ನಡೆದ ಚಾಕಡೆಡಿ ನೇಮೋತ್ಸವ

















