ಸುಳ್ಯ ಕಾಯರರ್ತೋಡಿ ಮಹಾವಿಷ್ಣು ದೇವರ ಕಾಲಾವಧಿ ಜಾತ್ರೋತ್ಸವ ಜ.26ರಿಂದ ಆರಂಭಗೊಂಡಿದೆ.
ಜ 27ರಂದು ದೇವಳದಲ್ಲಿ ರಾತ್ರಿ ಭೂತಬಲಿ ಉತ್ಸವ ಮತ್ತು ಕಟ್ಟೆ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮತ್ತು ಸದಸ್ಯರು,ಮಾಜಿ ಅಧ್ಯಕ್ಷ ಪಿ.ಕೆ ಉಮೇಶ ಮತ್ತು ಸದಸ್ಯರು,ಭಕ್ತಾಧಿಗಳು ಉಪಸ್ಥಿತರಿದ್ದರು.
ಬೆಳಿಗ್ಗೆ ಗಣಪತಿ ಹವಣ ಹವನ ನಡೆದು ಉಗ್ರಾಣ ತುಂಬಿಸಲಾಯಿತು.
ಬೆಳಿಗ್ಗೆ ಹಸಿರುವಾಣಿ ಮೆರವಣಿಗೆ ನಡೆಯಿತು.ತಂತ್ರಿಗಳ ಆಗಮನ,ಶುದ್ಧಿ ಕಲಶ,ತಲಾಭಾರ ಸೇವೆ,ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.
ಸುಳ್ಯ : ವೈಭವದಿಂದ ನಡೆದ ಮಹಾವಿಷ್ಣು ದೇವರ ಭೂತ ಬಲಿ ಉತ್ಸವ ಮತ್ತು ಕಟ್ಟೆ ಪೂಜೆ



































