ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವವು
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.30ರಂದು ನಡೆಯಲಿದೆ.
ಆ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಜರಗಲಿರುವ ಈ ದೇವತಾ ಕಾರ್ಯದಲ್ಲಿ ಭಕ್ತಾಭಿಮಾನಿಗಳಾದ ತಾವೆಲ್ಲರೂ ಭಾಗಿಗಳಾಗಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ. ಶ್ರೀ ವಿಷ್ಣುಮೂರ್ತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಳದ ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.
ಮಕರ ಮಾಸ ೧೬ನೇ ದಿನಾಂಕ 30-01-2026ನೇ ಶುಕ್ರವಾರ
ಪೂರ್ವಾಹ್ನ ಘಂಟೆ 8.00 ರಿಂದ
ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ ಮತ್ತು ಶುದ್ದಿ ಕಲಶ ಪೂರ್ವಾಹ್ನ ಘಂಟೆ 10.00ರಿಂದ
ವಿಷ್ಣುಪ್ರಿಯಾ ಮಹಿಳಾ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ
ಮಧ್ಯಾಹ್ನ ಘಂಟೆ 12.30ಕ್ಕೆ : ಮಹಾಪೂಜೆ ಮತ್ತು ಅನ್ನಸಂತರ್ಪಣೆ ಸಾಯಂಕಾಲ ಘಂಟೆ 6.30ಕ್ಕೆ
ರಂಗಪೂಜೆ, ಮಹೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಗುಳಿಗ, ಪಂಜುರ್ಲಿ, ಶಿರಾಡಿ ದೈವಗಳ ನೇಮ
ಪ್ರತಿಷ್ಠಾದಿನ, ಜಾತ್ರೋತ್ಸವದಂದು ಪೂರ್ವಾಹ್ನ 10-30ರ ಒಳಗೆ ಸೇವಾ ರಶೀದಿ ಪಡೆಯುವುದು.
ಸಹಾಯಧನ, ಬಲಿವಾಡು ಮತ್ತು ಹಸಿರುವಾಣಿ ಕಾಣಿಕೆಗಳನ್ನು ಹಿಂದಿನ ದಿನವೇ ತಂದೊಪ್ಪಿಸಬೇಕಾಗಿ ವಿನಂತಿ.
ನಿತ್ಯಪೂಜಾ ಬಾಬು ವಾರ್ಷಿಕ ರೂ. 500/-ನ್ನು ಕೊಟ್ಟು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಮಕರ ಮಾಸ ೨೯ ನೇ ದಿನಾಂಕ 12-02-2026ನೇ ಗುರುವಾರ ಬೆಳಿಗ್ಗೆ ಶ್ರೀ ನಾಗ ಮತ್ತು ಶ್ರೀ ದೈವಗಳ ಪ್ರತಿಷ್ಠಾ ದಿನ.ಬಲಿವಾಡು ಬಾಯ್ತು ಅಕ್ಕಿ ನೀಡುವ ಭಕ್ತಾದಿಗಳಿಗೆ ದೇವಸ್ಥಾನದ ಪ್ರಾಂಗಣದಲ್ಲಿ ಸೇವಾ ವ್ಯವಸ್ಥೆ ಮಾಡಲಾಗಿದೆ. (ಸೋನಾ ಮಸೂರಿ ಕಿಲೋ 1ರ ರೂ. 50/-) ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
ಪೆರುವಾಜೆ : ಜ.30ಕ್ಕೆ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವ

















