ವೈಭವದಿಂದ ನಡೆದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ಕಾಲಾವಧಿ ಜಾತ್ರೋತ್ಸವ

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ಕಾಲಾವಧಿ ಜಾತ್ರೋತ್ಸವವು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.30 ರಂದು ವೈಭವದಿಂದ ನಡೆಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆ,ಮಹಾಗಣಪತಿ ಹೋಮ ಮತ್ತು ಶುದ್ಧಿ ಕಲಶ ನಡೆಯಿತು.
ಬಳಿಕ ವಿಷ್ಣುಪ್ರಿಯಾ ಮಹಿಳಾ ಭಜನಾ ಮಂಡಳಿ ಬೆಳಂದೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ರಂಗಪೂಜೆ,ಮಹೋತ್ಸವ ಶ್ರೀ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ,ಮಂತ್ರಾಕ್ಷತೆ ನಡೆಯಿತು.
ನಂತರ ಗುಳಿಗ,ಪಂಜುರ್ಲಿ,ಶಿರಾಡಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕೇಸರರಾದ ಉಮೇಶ್ ರಾವ್ ಕೊಂಡೆಪ್ಪಾಡಿ,ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಗೌಡ ಜಾಲು ಮತ್ತು ಸದಸ್ಯರು, ಮೊಕೇಸರರಾದ ಕುಂಬ್ರ ದಯಾಕರ ಆಳ್ವ,ಡಾ.ನರಸಿಂಹಶರ್ಮ ಕಾನಾವು,ವಸಂತ ಬೈಪಾಡಿತ್ತಾಯ ಮುಕ್ಕೂರು, ಸುರೇಶ ಉಪಾಧ್ಯಾಯ ( ಅರ್ಚಕರು) ಕುಶಾಲಪ್ಪ ಗೌಡ ಪೆರುವಾಜೆ, ಸುಜಾತ ವಿ.ರಾಜ್ ಕಜೆ, ಪುಷ್ಪಾವತಿ ಎಂ.ಕಂಡಿಪ್ಪಾಡಿ,ಕೃಷ್ಣಪ್ಪ ನಾಯ್ಕ ದೇವಿಮೂಲೆ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top