ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಸಭಾಭವನದಲ್ಲಿ ಫೆ. 7 ರಂದು ನಡೆಯಲಿರುವ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಪೂರ್ವ ಸಿದ್ಧತೆ, ಆಮಂತ್ರಣ ವಿತರಣೆ ಕುರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೊಡಿಕಾನ ಒಕ್ಕೂಟದ ಸಭೆ ಫೆ. 1 ರಂದು ತೊಡಿಕಾನ ಬಿ. ಎಸ್. ಗೌಡ ಸಭಾಭವನದಲ್ಲಿ ನಡೆಯಿತು.
ಸಾರ್ವಜನಿಕ ಸತ್ಯನಾರಾಯಣ ಪೂಜೆ ಸಮಿತಿ ಅಧ್ಯಕ್ಷೆ ಮಾಲತಿ ಭೋಜಪ್ಪ ಅಧ್ಯಕ್ಷತೆ ವಹಿಸಿದ್ದರು. ತೊಡಿಕಾನ ಒಕ್ಕೂಟದ ಅಧ್ಯಕ್ಷ ಜನಾರ್ದನ ಬಾಳೆಕಜೆ, ಸಂಪಾಜೆ ವಲಯ ಅಧ್ಯಕ್ಷ ಹೂವಯ್ಯ ಗೌಡ, ಚಂದ್ರಶೇಖರ ನೆಡ್ಚಿಲು, ಅಶೋಕ್ ಪೀಚೆಮನೆ, ಪೂಜಾ ಸಮಿತಿ ಉಪಾಧ್ಯಕ್ಷರಾದ ಚಂದ್ರಕಲಾ ಕುತ್ತಮೊಟ್ಟೆ, ಚಂದ್ರಶೇಖರ ಆಚಾರ್ಯ ಪಂಜಿಕೋಡಿ ವೇದಿಕೆಯಲ್ಲಿದ್ದರು.
ತೊಡಿಕಾನ : ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಪೂರ್ವ ತಯಾರಿ ಸಭೆ

















