ಪಂಜ ಸೀಮೆ ದೇವಾಲಯವಾದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.5 ರಂದು ಶ್ರೀ ದೇವರ ದರ್ಶನ ಬಲಿ ವೈಭವದಿಂದ ನಡೆಯಿತು.
ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ. ನಡೆಯಿತು.
ಶ್ರೀ ದೇವರ ಬಲಿಯೊಂದಿಗೆ ವೇದ ಮಂತ್ರ ಘೋಷ ಸ್ಯಾಕ್ಸೋಪನ್ , ಚೆಂಡೆ, ಬ್ಯಾಂಡ್ ವಾಲಗ ಬೇತಾಳಗಳು,ಗೊಂಬೆಗಳು, ಪಾರ್ಚೋಡ್ ಪ್ರಖ್ಯಾತ್ ರೈ ರವರ ಗೂಳಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷರಾದ ಡಾ.ರಾಮಯ್ಯ ಭಟ್, ಪದ್ಮನಾಭ ರೈ ಅಗೋಳಿಬೈಲು ಗುತ್ತು, ಸದಸ್ಯರಾದ ಸತ್ಯರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ, ಮಾಯಿಲಪ್ಪ ಗೌಡ ಪಟ್ಟೆ ಎಣ್ಣೂರು, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ ಬಳ್ಳ, ಶ್ರೀಮತಿ ಮಾಲಿನಿ ಕುದ್ವ, ಪವಿತ್ರ ಮಲ್ಲೆಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ್ ಗಬ್ರಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ, ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ,ಪರಮೇಶ್ವರ ಬಿಳಿಮಲೆ ಉದಯ ಕುಮಾರ್ ಬೆಟ್ಟ, ಸೀಮೆಯ ಸಾವಿರಾರು ಭಕ್ತಾದಿಗಳು, ಅರ್ಚಕರು,ದೇವಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಂಜ : ವೈಭವದಿಂದ ನಡೆದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ದರ್ಶನ ಬಲಿ



































