ಪಂಜ : ಶ್ರೀ ದೇವರ ಕಾಚುಕುಜುಂಬ ದೈವದ ನೇಮ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವಾರ್ಷೀ ಜಾತ್ರೋತ್ಸವದ ಪ್ರಯುಕ್ತ ಫೆ.7.ರಂದು ರಾತ್ರಿ ಶ್ರೀ ದೇವರ ಶ್ರೀ ಕಾಚುಕುಜುಂಬ ದೈವದ ನೇಮ ಮತ್ತು ಶ್ರೀ ಉಳ್ಳಾಕುಲು ದೈವದ ನೇಮ ಮೂಲಸ್ಥಾನ ಪಂಬೆತ್ತಾಡಿ ಗ್ರಾಮದ ಗರಡಿ ಬೈಲಿನಲ್ಲಿ ನಡೆಯಿತು.
ಫೆ. 7 ರಂದು ಪೂರ್ವಾಹ್ನ ಗರಡಿ ಬೈಲು ಮೂಲನಾಗನ ಕಟ್ಟೆಯಲ್ಲಿ ತಂಬಿಲ ಸೇವೆ. ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವನೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್, ಸದಸ್ಯರಾದ ಸತ್ಯ ನಾರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ, ಮಾಯಿಲಪ್ಪ ಗೌಡ ಎಮ್ಮೂರು ಪಟ್ಟೆ, ಸಂತೋಷ್‌ ಕುಮಾರ್ ರೈ ಪಲ್ಲತ್ತಡ್ಕ ಬಳ್ಳ, ಮಾಲಿನಿ ಕುದ್ದ, ಪವಿತ್ರ ಕುದ್ವ -ಮಲ್ಲೆಟಿ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ,ಪರಮೇಶ್ವರ ಬಿಳಿಮಲೆ ಉದಯ ಕುಮಾರ್ ಬೆಟ್ಟ,ಉಮೇಶ್ ಬುಡೆಂಗಿ ಬಳ್ಳ, ಸೀಮೆಯ ಭಕ್ತಾದಿಗಳು, ಅರ್ಚಕರು,ದೇವಳ ಸಿಬ್ಬಂದಿಗಳು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಫೆ.8.ರಂದು ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ. ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪುತ್ಯದಿಂದ ಶಿರಾಡಿ ದೈವದ ಭಂಡಾರ ತರುವುದು ಹಾಗೂ ರುದ್ರ ಚಾಮುಂಡಿ ದೈವದ ಭಂಡಾರ ತೆಗೆಯುವುದು ನಡೆಯಲಿದೆ.
ಫೆ.9 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ, ಅನ್ನಸಂತರ್ಪಣೆ ನಡೆಯಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top