ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾಯಿಲಕೋಟೆ ಶಿಖರದ ಪುಣ್ಯ ನೆಲದಲ್ಲಿ ರಾಮದಾಸ ಭಕ್ತಾಗ್ರೇಸರ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ಗುಳಿಗರಾಜನ ಪುಣ್ಯ ಕ್ಷೇತ್ರವಿದೆ. ಹಸಿರ ಹೊದಿಕೆಯ ಪ್ರಕೃತಿ ರಮಣೀಯ ಸಿರಿಯ ಸೊಬಗಿನಿಂದ ಕಂಗೊಳಿಸುವ ಈ ಬೆಟ್ಟವೂ ಇಂದು ಎಲ್ಲೆಡೆ ಅಂಜನಾದ್ರಿಯೆಂದೇ ಕರೆಯಲ್ಪಡುತ್ತಿದೆ.
ಈ ಕ್ಷೇತ್ರದಲ್ಲಿ ವರುಷದ ಪ್ರತೀ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಅಪರೂಪವೆನಿಸುವಂತೆ ಪ್ರತೀ ಜಾತ್ರೆಗೆ ಶ್ರೀ ಹನುಮ ನೇಮ ಸೇವೆಯು ನಡೆಯುತ್ತಿರುವುದು ಈ ಸ್ಥಳದ ಕಾರಣಿಕತೆಯನ್ನು ಸೂಚಿಸುತ್ತದೆ. ಇದನ್ನು ನೋಡಲು ಸುತ್ತಮುತ್ತಲಿನ ಭಕ್ತರಲ್ಲದೇ ಬಹು ದೂರದಿಂದಲೂ ಬಂದು ತಮ್ಮ ಮನದ ಇಷ್ಟಾರ್ಥವನ್ನು ಹೇಳಿ ಪೂರೈಸಿ ತೆರಳಿ ಕೃತಾರ್ಥರಾಗುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ಪ್ರತೀ ಶನಿವಾರ ವಾರದ ಭಜನಾ ಸೇವೆ ಅಲ್ಲದೇ ವಿಶೇಷ ಪರ್ವದ ದಿನಗಳಲ್ಲಿ ದೇವರಿಗೆ ಬೇರೆ ಬೇರೆ ಭಕ್ತಿಯ ಸೇವೆಯು ನಡೆಯುತ್ತಲೇ ಇರುತ್ತದೆ. ಮುಖ್ಯವಾಗಿ ಪ್ರತೀ ವರುಷದ ಶ್ರಾವಣ ಮಾಸದ ಆರಂಭದಿಂದ ಮೊದಲ್ಗೊಂಡು ಮಾಸದ ಕೊನೆಯವರೆಗೂ ವಾರದ ಶನಿವಾರ ಹಾಗೂ ಜಾತ್ರಾ ಸಮಯದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯುತ್ತಲೇ ಬರುತ್ತಿದೆ. ಇದರಲ್ಲಿ ಕ್ಷೇತ್ರದ ಸುತ್ತಮುತ್ತಲಿನ ಭಜನಾ ಮಂಡಳಿಗಳಲ್ಲದೇ ಬಹು ದೂರದ ಊರಿನ ಭಜನಾ ಮಂಡಳಿಗಳು ಕೂಡ ಆಗಮಿಸಿ ಭಜನಾ ಸೇವೆಯನ್ನು ಮಾಡಿ ಕೃತಾರ್ಥತೆ ಹೊಂದುತ್ತಾರೆ.
ಈ ಕ್ಷೇತ್ರವು 2015 ರಲ್ಲಿ ನೂತನವಾಗಿ ನಿರ್ಮಾಣಗೊಂಡು ಅದ್ದೂರಿಯ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಜರುಗಿ ಹನ್ನೆರಡು ವರ್ಷಗಳೇ ಸಂದವು.
ಇದೀಗ ಮತ್ತೆ 2026 ರ ಮಾರ್ಚ್ ತಿಂಗಳಿನಲ್ಲಿ ಶ್ರೀಕ್ಷೇತ್ರದಲ್ಲಿ ನಡೆಯುವ ಚೈತನ್ಯ ಬ್ರಹ್ಮಕಲಶದ ಅಂಗವಾಗಿ ಶ್ರೀ ಪ್ರಸನ್ನ ಆಂಜನೇಯ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿ , ಶ್ರೀ ಪ್ರಸನ್ನಾಂಜನೇಯ ಭಜನಾ ಮಂಡಳಿ ಅಂಜನಾದ್ರಿ ಅಡ್ಕಾರು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಸುಳ್ಯ ತಾಲೂಕು ಮತ್ತು ಜಾಲ್ಸೂರು ವಲಯ ಭಜನಾ ಪರಿಷತ್ತು , ಇವರ ಸಹಯೋಗದಲ್ಲಿ ಮಾರ್ಚ್ 7 ರ ಪ್ರಾತಃಕಾಲದಿಂದ ಮೊದಲ್ಗೊಂಡು ಮಾರ್ಚ್ 9 ರ ಪ್ರಾತಃ ಕಾಲದವರೆಗೆ 48 ಗಂಟೆಗಳ ಅಖಂಡ ಭಜನಾ ಸಂಕೀರ್ತನೆ ನಡೆಯಲಿದೆ.
ಈ ಸಂಕೀರ್ತನೆಯಲ್ಲಿ ತಮ್ಮ ಭಜನಾ ಮಂಡಳಿಯು (ಕುಳಿತು ಅಥವಾ ಕುಣಿತ ) ಸೇವೆ ಮಾಡಲಿಚ್ಛಿಸುವುದಿದ್ದರೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸುವಂತೆ ಭಕ್ತಿಯ ವಿನಂತಿ. ಅಂತೆಯೇ ತಮ್ಮ ಭಜನಾ ಸೇವೆಯ ಸಮಯವನ್ನು ಖಾತ್ರಿಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗೆ ಕರೆಮಾಡಿ
8762025608
9741053845
8277205738
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಸುಳ್ಯತಾಲೂಕು ಮತ್ತು ಜಾಲ್ಸೂರು ವಲಯ ಭಜನಾ ಪರಿಷತ್ತು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಅಖಂಡ ಭಜನಾ ಸಮಿತಿ
ಶ್ರೀ ಪ್ರಸನ್ನ ಆಂಜನೇಯ ಭಜನಾ ಮಂಡಳಿ ಅಂಜನಾದ್ರಿ ಅಡ್ಕಾರು ಸುಳ್ಯ ದಕ್ಷಿಣ ಕನ್ನಡ ಜಿಲ್ಲೆ.



































