ಅರಂತೋಡು ಗ್ರಾಮ ಪಂಚಾಯತ್ ಗ್ರಾಮ ಸಭೆ

ಅರಂತೋಡು, ಫೆ‌ 10 : ಆರಂತೋಡು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಅಧ್ಯಕ್ಷತೆ ಯಲ್ಲಿ ಪಂಚಾಯತ್ ಅಮೃತ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ಪಂಚಾಯತ್ ಆಡಳಿತ ಸಮಿತಿ 5ವರ್ಷದಲ್ಲಿ ಮಾಡಿದ ಕೆಲಸ ಕಾರ್ಯಗಳ.ಸಾಧನೆಯ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯ.ಎಂ. ಸಿ. ಭಾಗವಹಿಸಿದ್ದರು.
ಸಭೆ ಪ್ರಮುಖವಾಗಿ ಆರಂತೋಡು ಗ್ರಾಮದಲ್ಲಿ ವಿಶೇಷವಾಗಿ ಅಡ್ತಲೆ ಭಾಗದಲ್ಲಿ ಕೃಷಿಕರ ತೋಟಗಳಿಗೆ ನಿರಂತರ ಆನೆ ದಾಳಿಯಿಂದ ಕೃಷಿ ನಾಶ ಮಾಡುತ್ತಿರುವುದು ಮತ್ತು ಆರಂತೋಡು -ಏಲಿಮಲೆ ರಸ್ತೆ ಯಲ್ಲಿ ಹಗಲು ಹೊತ್ತಿನಲ್ಲಿ ರಸ್ತೆ ಯಲ್ಲಿ ಕಾಣ ಸಿಗುವುದರಿಂದ ಪ್ರಯಾಣಿಕರು, ಶಾಲಾ ಮಕ್ಕಳಿಗೆ ಭಯದ ವಾತಾವರಣ ಉಂಟಾಗಿದ್ದು ಸರಕಾರ ಮತ್ತು ಅರಣ್ಯ ಇಲಾಖೆ ಸಮಸ್ಯೆಗೆ ಶಾಶ್ವತ ಮಾರ್ಗೋಪಾಯಗಳನ್ನು ಕಲ್ಪಿಸಿಕೊಡಬೇಕೆಂದು ಹಾಕ್ಕೋತಾಯ ಮಂಡಿಸಿದರು. ಅಲ್ಲದೆ ಸರಕಾರ ಸೋಲಾರ್ ಬೇಲಿಗೆ ನೀಡುವ 50% ಸಬ್ಸಿಡಿಯಲ್ಲಿ ಅಡಿಕೆ ಹಳದಿ ರೋಗ, ಎಲಚುಕ್ಕಿ ರೋಗ ಬಾದಿಸಿರುವ ಸಂಕಷ್ಟ ಕಾಲದಲ್ಲಿ ರೈತರಿಗೆ ಸೋಲಾರ್ ಬೇಲಿ ನಿರ್ಮಿಸಲು ಕಷ್ಟ ಸಾಧ್ಯ ಆದುದರಿಂದ ಸರಕಾರವೇ ಸಂಪೂರ್ಣವಾಗಿ ವೆಚ್ಚ ಭರಿಸಿ ಸೋಲಾರ್ ಬೇಲಿ ನಿರ್ಮಿಸಿ ಕೊಡಬೇಕು ಅಥವಾ ಬೇರೆ ಇತರ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆಂದು ಲೋಹಿತ್ ಮೇಲಾಡ್ತ ಲೆ,.ಮನಮೋಹನ ಚುಕ್ರಡ್ಕ ಮತ್ತಿತರರು ಅಗ್ರಹಿಸಿದರು. ಆನೆ ದಾಳಿಯಿಂದ ಪರಿಹಾರ ಸಿಕ್ಕಿದ ರೈತರಿಗೆ ಮಾತ್ರ ಕೋವಿ ಪರವಾನಿಗೆ ನವೀಕರಣ ಎಂಬ ಕಾನೂನು ಎಷ್ಟು ಸಮಂಜಸ, ಆದರೆ ಮಂಗಗಳು ಕಾಡು ಹಂದಿ ಇನ್ನಿತರ ಪ್ರಾಣಿಗಳಿಂದ ಕೃಷಿ ಹಾನಿಯಾಗುವುದಿಲ್ಲವೇ, ಅವು ಕಾಡು ಪ್ರಾಣಿಗಳು ಅಲ್ಲವೇ ಎಂದು ಅಧಿಕಾರಿಗಳ ಮುಂದೆ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ ಪ್ರಶ್ನೆ ಎತ್ತಿದರು. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿ ಪಡಿಸಬೇಕೆಂದು ಆಗ್ರಹಿಸಿದರು. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತು ಇದ್ದ ಶಿಕ್ಷಕರನ್ನು ಚುನಾವಣೆ ಇನ್ನಿತರ ಕೆಲಸಗಳ ಹೊಣೆ ಹೋರಿಸಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಅಡ್ತಲೆ ಮತ್ತು ಆರಂತೋಡು ಶಾಲೆಗಳ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರುಗಳಾದ ಲೋಹಿತ್ ಎಂ. ಎ, ಸುರೇಶ್ ಉಳುವಾರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿಸಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಸರಿಪಡಿಸಳು ಪ್ರಯತ್ನ ಮಾಡುವುದಾಗಿ. ಶಿಕ್ಷಣ ಇಲಾಖೆಯ ಸಿ. ಆರ್. ಪಿ.ಯವರಾದ ಮಮತ ಹೇಳಿದರು. ಕಿರ್ಲಾಯ ಶಾಲೆಯ ಹಳೆಕಟ್ಟಣ ಶಿಥಿಲಾವಸ್ತೆ ತಲುಪಿದ್ದು ತೆರವುಗೊಳಿಸಬೇಕೆಂದು ಮನಮೋಹನ ಚುಕ್ರಡ್ಕ ಅಗ್ರಹಿಸಿದರು. ಗ್ರಾಮ ಸಭೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವಲ್ಲಿ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ವಾನುಮತದಿಂದ ನಿರ್ಣಯಿಸಿತು. ಆರಂತೋಡು ಪೇಟೆಯಲ್ಲಿ ಹೆದ್ದಾರಿ ಬದಿಯ ಚರಂಡಿ ದುರಸ್ತಿ ಮಾಡಬೇಕೆಂದು ಚಂದ್ರಶೇಖರ ಉಳುವಾರು ಒತ್ತಾಯಿಸಿದರು. ಈ ಬಗ್ಗೆ ಹೆದ್ದಾರಿ ಪ್ರಾದಿಕಾರಕ್ಕೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು. ಉಳಿದಂತೆ ಪೇಟೆಯಲ್ಲಿ ಗುಟುಕ ಸಹಿತ ಕಸ ಬಿಸಾಡುವವರಿಗೆ ದಂಡ ವಿಧಿಸಬೇಕೆಂದು ಬಾಲಕೃಷ್ಣರೈ ಒತ್ತಾಯಿಸಿದರು. ಬಾಜಿನಡ್ಕ ಪರಿಶಿಷ್ಟ ಜಾತಿ ಕಾಲನಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮನ್ಸಮುಗೇರ ಮತ್ತು ಸುಂದರ ಬಾಜಿನಡ್ಕ ಮನವಿ ಮಾಡಿದರು.ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು. ವಿದ್ಯುತ್ ವೋಲ್ಟೇಜ್ ಬಗ್ಗೆ ಸಂತೋಷ್ ಕುತ್ತ ಮೊಟ್ಟೆಯವರು ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆದಾಗ ಲೋ ವೋಲ್ಟೇಜ್ ಸಮಸ್ಯೆಗೆ ಕ್ರಮ ಕೈಗೊಳ್ಳುವುದಾಗಿ ಜೂನಿಯರ್ ಇಂಜಿನಿಯರ್ ಪರಶುರಾಮ್ ಭರವಸೆ ನೀಡಿದರು. ಈ ಆಡಳಿತ ಅವಧಿಯು ಫೆಬ್ರವರಿ 16ಕ್ಕೆ ಮುಕ್ತಾಯಗೊಳ್ಳುವುದರಿಂದ ಪಂಚಾಯತ್ ವತಿಯಿಂದ ಅರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮಟ್ಟೆಯವರು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೀಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿ ಮಾತಾಡಿ ಈಗಿನ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಸುಳ್ಯ ತಾಲೂಕಿಗೆ ಮಾದರಿ ಗ್ರಾಮ ಪಂಚಾಯತ್ ಆಗಿ ಕಾರ್ಯ ನಿರ್ವಹಿಸಿ,ಎರಡು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದಾಗ ಇಡಿ ಗ್ರಾಮಸಭೆ ಚಪ್ಪಾಳೆಯ ಮೂಲಕ ಆಡಳಿತ ಸಮಿತಿಗೆ ಗೌರವ ಸಲ್ಲಿಸಿತು. ಗ್ರಾಮ ಸಭೆಯ ಅಧ್ಯಕ್ಷತೆಯ ಮಾತಾನಾಡಿದ ಕೇಶವ ಅಡ್ತಲೆ ತಮ್ಮ ಅಧಿಕಾರ ಅವಧಿಯಲ್ಲಿ ಸಂಪೂರ್ಣ ಸಹಕರಿಸಿದ ಅವಳಿ ಗ್ರಾಮಗಳ ಗ್ರಾಮಸ್ಥರೀಗೆ,ಮಾನ್ಯ ಶಾಸಕರು, ಜನಪ್ರತಿನಿದಿನಗಳಿಗೆ,ಸರಕಾರದ ವಿವಿಧ ಇಲಾಖೆಯ ಅಧಿಕಾರಿ ವರ್ಗದವರಿಗೆ, ಸಂಘ, ಸಂಸ್ಥೆಯ ಪದಾಧಿಕಾರಿಗಳಿಗೆ, ಪಂಚಾಯತ್ ಸಿಬ್ಬಂದಿಗಳಿಗೆ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಿಗೆ, ಮಾಧ್ಯಮದವರಿಗೆ ಮತ್ತು ಪಂಚಾಯತ್ಗೆ ಸಹಾಯ ಹಸ್ತ ನೆರವು ನೀಡುತ್ತಿರುವ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ನಮಗೆ ನೀಡಿದ ಸಹಕಾರವನ್ನು ಮುಂದಿನ ಪಂಚಾಯತ್ ಆಡಳಿತಕ್ಕೆ ನೀಡುವಂತೆ ಮನವಿ ಮಾಡಿದರು.ಗ್ರಾಮ ಸಭೆಯಲ್ಲಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ರವೀಂದ್ರ ಪೂಜಾರಿ ಪಂಜಿಕೋಡಿ, ಗಂಗಾಧರ ಗುಂಡ್ಲಬನ, ಪುಷ್ಪಾಧರ ಕೊಡಂಕೇರಿ, ಶಶಿಧರ ದೊಡ್ಡ ಕುಮೇರಿ, ಹರಿಣಿ ದೇರಾಜೆ, ಶ್ವೇತಾ ಅರಮನೆಗಾಯ, ಮಾಲಿನಿ ಉಳುವಾರು, ಸುಜಯಾ ಮೇಲೆಅಡ್ತಲೆ, ಉಷಾ ಅದ್ಯಡ್ಕ, ವಿನೋದ ತೋಡಿಕಾನ,ಸರಸ್ವತಿ ಬಿಳಿಯಾರು ಹಾಜರಿದ್ದರು. ಪಂಚಾಯತ್ ಸಿಬ್ಬಂದಿ ಈಶ್ವರ್ ವರದಿವಾಚಿಸಿದರು.ಗ್ರಾಮ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು ಉಪಾಧ್ಯಕ್ಷರಾದ ಭವಾನಿ ಚಿಟ್ಟಾನೂರ್ ಧನ್ಯವಾದಗಳನ್ನು ಸಮರ್ಪಿಸಿದ ಗ್ರಾಮ ಸಭೆಗೆ ಪಂಚಾಯತ್ ಮತ್ತು ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು. ಗ್ರಾಮ ಸಭೆಗೆ ಬಂದವರಿಗೆ ಊಟ ವ್ಯವಸ್ಥೆಯನ್ನು ಮಾಡಲಾಗಿತ್ತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top