ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಭೂಮಿಯ ಜೊತೆಗೆ ಸೈಟ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿಂದು ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಭೂಮಿ ಖರೀದಿ ಮಾಡಿ ಸೈಟ್ ನೀಡಲು ವಿಶೇಷ ಅನುದಾನ ನೀಡಿದ್ದು, ಮುಖ್ಯಮಂತ್ರಿ ಅನುಮೋದನೆ ಬಳಿಕ 30 – 40 ಸೈಟ್‌ಗಳನ್ನು ಎಸ್ಸಿ, ಎಸ್ಟಿ ಸಮುದಾಯದವರಿಗೆ ನೀಡಲಾಗುವುದು ಎಂದು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯದವರಿಗೆ 30 – 40 ಸೈಟ್ ಭಾಗ್ಯ!



































