ಅರಂತೋಡು ನಯಾರ ಪೆಟ್ರೋಲ್ ಪಂಪ್ ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾಗಿ ವಂಚಿಸಿದ ಘಟನೆ ಫೆ.13ರಂದು ನಡೆದಿದೆ.
ಕಾರು ಚಾಲಕ ಕಾರಿಗೆ ರೂ. 2, 510 ಪೆಟ್ರೋಲ್ ಹಾಕಿಸಿ ಪರಾರಿಯಾದ.ಬಳಿಕ ಜಾಲ್ಸೂರು ಚೆಕ್ ಪೋಸ್ಟ್ ಬಳಿ ಫಾರೆಸ್ಟ್ ಸಿಬ್ಬಂದಿಗಳು, ಆಟೋ ಚಾಲಕರು, ಜಾಲ್ಲೂರು ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಅಡ್ಡ ಗಟ್ಟಿದಾಗ ಕಾರನ್ನು ನಿಲ್ಲಿಸದೇ ಪುತ್ತೂರಿನತ್ತ ಪರಾರಿಯಾದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಅರಂತೋಡು : ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾದ ಕಾರು



































