ಫೆ.17ರ ಮುಂಜಾನೆ ಜಾಲ್ಸೂರು ಸಮೀಪದ ಪೆರ್ನಾಜೆಗೆ ಕಾಡಾನೆ ಇಲ್ಲಿಯ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನಗ್ಗಿ 10ಕ್ಕೂ ಮಿಕ್ಕಿ ಬಾಳೆ ಗಿಡ 3 ಅಡಿಕೆ ಗಿಡಗಳು ದ್ವಂಸ ಮಾಡಿವೆ.
ಗುಡ್ಡಡ್ಕ ಆನೆಗುಂಡಿ ಕಡೆ ಬಂದಿರುವ ಆನೆ ರಸ್ತೆಯಲ್ಲಿ ಹಿಂತಿರುಗಿದೆ. ಮತ್ತೆ ಪೆರ್ನಾಜೆಗೆ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ. ಸೋಲಾರ್ ಬೇಲಿಯೂ ಅಳವಡಿಸಿದ್ದರು ನಿಷ್ಪ್ರಯೋಜಕವಾಗಿದೆ ಇದನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಇಲ್ಲವಾದಲ್ಲಿ ಮತ್ತೆ ಮತ್ತೆ ರೈತರ ತೋಟಕ್ಕೆ ಆನೆ ದಾಳಿ ಮಾಡುತ್ತ ಇರುತ್ತವೆ. ಅಲ್ಲದೆ ಮುಂದೆ ಮಾನವರ ಪ್ರಾಣಾಪಾಯಕ್ಕೂ ಸಂಚಕಾರ ಬರಬಹುದು.
ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳದೆ ಇದ್ರೆ ಗ್ರಾಮಸ್ತರು ರೊಚ್ಚಿಗೇಳುವ ಪರಿಸ್ಥಿತಿ ಉಂಟಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಸತತ ಹಲವಾರು ಬಾರಿ ಕಾಡಾನೆಗಳ ದಾಳಿ ಹೆಚ್ಚುತ್ತಿದ್ದು ಈ ತನಕ ಯಾವುದೇ ಪರಿಹಾರ ಸಿಗಲಿಲ್ಲ. ಶಾಸಕರು ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕಾಗಿದೆ ಎಂದು ಊರವರು ಕೃಷಿಕರು ಒತ್ತಾಯಿಸಿದ್ದಾರೆ.
ಪೆರ್ನಾಜೆ : ನಿರಂತರ ಕಾಡಾನೆ ದಾಳಿ!



































