ಅರಂತೋಡು-ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ
ಫೆ.21ರಂದು ಗುಳಿಗ ದೈವದ ಕೋಲ ಹಾಗೂ ಕೊರಗಜ್ಜ ದೈವದ ಕಾಲಾವಧಿಯ ಕೊಲ ಹಾಗೂ ಹರಕೆ ಕೋಲ ನಡೆಯಿತು.
ಶ್ರೀ ದೈವತಾಕಾರ್ಯಕ್ಕೆ ಭಕ್ತರು ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾದರು. 8-30ರಿಂದ
ಅನ್ನಸಂತರ್ಪಣೆ ನಡೆಯಿತು.
ದಿನಾಂಕ 22-02-2026ನೇ ಆದಿತ್ಯವಾರ ರಾತ್ರಿ ಗಂಟೆ 8-00 ರಿಂದ ದಿನಾಂಕ 23-02-2026ನೇ ಸೋಮವಾರದವರೆಗೆ
ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ನಡೆಯಲಿದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತನು-ಮನ-ಧನ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ದೈವಸ್ಥಾನದ ಆಡಳಿ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.
ಈ ದಿನ ಅಗೇಲು ಸೇವೆ ನಡೆಯಲಿದೆ.
ಅರಂತೋಡು : ಶ್ರದ್ಧಾ ಭಕ್ತಿಯಿಂದ ನಡೆದ ಕೊರಗಜ್ಜ ದೈವದ ಕಾಲಾವಧಿಯ ಕೋಲ ಹಾಗೂ ಹರಕೆ ಕೋಲ

















