ಕೂತ್ಕುಂಜ : ಅರೆಭಾಷೆ ನಾಟಕ ಪ್ರದರ್ಶನ ಉದ್ಘಾಟನೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತ ಪಡಿಸುವ ಶಿವಾಜಿ ಯುವಕ ಮಂಡಲ (ರಿ) ಕೂತ್ಕುಂಜ, ಪಂಜ ಇದರ ಆಶ್ರಯದಲ್ಲಿ ಕೂತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ಅರೆಭಾಷೆ ನಾಟಕ ‘ಅಪ್ಪ’ ಹಾಗೂ ಗಾನ ವೈಭವ ಫೆ.21 ರಂದು ನಡೆಯಿತು.
ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ಅಪ್ಪ ನಾಟಕ 8ನೇ ಪ್ರದರ್ಶನ ನಡೆಯುತ್ತಿದೆ. ಜನರ ಮುಟ್ಟಲು ಪ್ರಯತ್ನ ನಡೆದಿದೆ ಎಂಬ ಆತ್ಮ ತೃಪ್ತಿ ನಮಗಿದೆ. ಅಪ್ಪನ ಪ್ರಾಮುಖ್ಯತೆ ಏನು. ಅಪ್ಪ ಎಷ್ಟು ಸಹಿಸಿಕೊಂಡು ತನ್ನ ಕುಟುಂಬಕ್ಕಾಗಿ ಜೀವನ ಮಾಡುತ್ತಾನೆ ಮತ್ತು ನಮ್ಮ ಕೃಷಿ ಜೀವನದ ಕಷ್ಟ -ಸುಖಗಳೆಲ್ಲಾ ತಿಳಿಸುವ ನಾಟಕ.ನಮ್ಮ ಅರೆ ಭಾಷೆ ಬೆಳೆಯಲು ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ.” ಎಂದು ಹೇಳಿದರು.
ಶಿವಾಜಿ ಯುವಕ ಮಂಡಲದ ಆಧ್ಯಕ್ಷ ಆದರ್ಶ ಚಿದ್ದಲ್ಲು, ನಾಟಕ ರಚನೆ ಮತ್ತು ನಿರ್ದೇಶಕರಾದ ಲೋಕೇಶ್ ಉರುಬೈಲ್, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಕುಳಿ, ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕ ದೇವಿಪ್ರಸಾದ್‌, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ್‌ ಕಿನ್ನಿಕುಮೇರಿ, ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಸಾಂಸ್ಕೃತಿಕ ಸಂಘಟಕ ಶಶಿಧ‌ರ್ ಪಳಂಗಾಯ, ಶಿವಾಜಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗೀಶ್ ಚಿದ್ದಲ್ಲು,ಕಾರ್ಯಕ್ರಮ ಸಂಯೋಜಕರಾದ ಕಾರ್ಯಪ್ಪ ಗೌಡ ಚಿದ್ದಲ್ಲು, ಜಯರಾಮ ಕಲ್ಲಾಜೆ, ಯುವಕ ಮಂಡಲದ ಕಾರ್ಯದರ್ಶಿ ಲಿಖಿತ್ ಅಜ್ಜಿಹಿತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top