ಫೆ.28ರ ತನಕ ಕರಾವಳಿ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ

ಕೇರಳದ ಗಡಿಯಲ್ಲಿ ತಲುಪಿರುವ ಸೈಕ್ಲೋನಿಕ್ ಸುಳಿಯು ನಗರದೆ ಮಂದಿಗೂ ಎಚ್ಚರಿಕೆಯ ಗಂಟೆಯಾಗಿದೆ. ಫೆಬ್ರವರಿ 28ರವರೆಗೆ ಕರಾವಳಿಯ ಆಕಾಶದಲ್ಲಿ ಮೋಡಗಳು ಕಣ್ಣಮುಚ್ಚಾಲೆ ಆಡಲಿವೆ. ಮಂಗಳೂರು, ಉಳ್ಳಾಲ, ಬಂಟ್ವಾಳ ಸೇರಿದಂತೆ ದ.ಕ ಜಿಲ್ಲೆಯ ಸುತ್ತಮುತ್ತಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರಬ್ಬಿ ಸಮುದ್ರದ ಅಂಚಿನಲ್ಲಿ ಗಾಳಿಯ ವೇಗ ಗಂಟೆಗೆ 60 ಕಿಲೋಮೀಟರ್ ಮುಟ್ಟಬಹುದು. ಸಮುದ್ರ ರಾಜ ಅಂದುಕೊಂಡಷ್ಟು ಶಾಂತವಾಗಿಲ್ಲ. ಮಂಗಳೂರಿನ ಸುತ್ತಮುತ್ತ ಮಿಂಚಿನ ಅಬ್ಬರ ಜೋರಾಗಿರಲಿದೆ. ಮಳೆಗಿಂತಲೂ ಅಪಾಯಕಾರಿಯಾಗಿ ಸಿಡಿಲಿನ ಹೊಡೆತ ಜೋರಾಗುವ ಸಾಧ್ಯತೆಯಿದೆ. ಸಮುದ್ರದಂಚಿನಲ್ಲಿ ಗಾಳಿಯ ರಭಸ ಹೆಚ್ಚಾಗಲಿದೆ. ಮೀನುಗಾರಿಕೆಗೆ ಅಧಿಕೃತ ನಿಷೇಧವಿಲ್ಲದಿದ್ದರೂ, ಸಮುದ್ರಕ್ಕೆ ಇಳಿಯುವ ಮುನ್ನ ಹವಾಮಾನವನ್ನು ಗಮನಿಸಬೇಕು. ಆಕಾಶ ಕಪ್ಪಾದಾಗ ಫೋನ್ ಹಿಡಿದು ರೀಲ್ಸ್ ಮಾಡುವುದನ್ನು ನಿಲ್ಲಿಸಬೇಕು. ಎಲೆಕ್ಟ್ರಾನಿಕ್ ಸಾಧನಗಳನ್ನು ಅನ್‌ಪ್ಲಗ್ ಮಾಡಬೇಕು. ಮನೆಯ ಹೊರಗೆ ಕಟ್ಟಿದ ದನ-ಕರುಗಳ ಬಗ್ಗೆ ಕಾಳಜಿ ಇರಲಿ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top