ಸಮಾಜದಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ವಿವಿಧ ಆಚರಣೆಯಲ್ಲಿ ಮೊಗೇರ ಜನಾಂಗದ ಪಾತ್ರ ಅಪಾರವಾದುದು :ಡಾ.ಅಭಯಕುಮಾರ್

ಸಮಾಜದಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ವಿವಿಧ ಆಚರಣೆಯಲ್ಲಿ ಮೊಗೇರ ಜನಾಂಗದ ಪಾತ್ರ ಅಪಾರ ವಾದುದು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಎಸ್‌.ವಿ.ಪಿ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಅಭಯಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಮೊಗೇರ ಸಂಘ ಇದರ ಸುವರ್ಣ ಸಂಭ್ರಮ ಅಂಗವಾಗಿ ಸುಳ್ಯದ ಕೊಡಿಯಾಲಬೈಲಿನ ಗೌಡರ ಯುವ ಸೇವಾ ಸಂಘದ ಸಭಾಂಗಣದಲ್ಲಿ ಫೆ 28ರಂದು ರಾಜ್ಯ ಮೊಗೇರ ದುಡಿ ಆಯನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಜಿ ಭಾಷಣ ಮಾಡಿದರು.
ನಮ್ಮ ಯುವಕರು ದಾರಿ ತಪ್ಪುತ್ತಿದ್ದು ಅವರನ್ನು ಹೆತ್ತವರು ಸರಿದಾರಿಗೆ ತಂದು ಅವರು ಸಮಾಜದಲ್ಲಿ ಬಲಿಷ್ಠವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು.ಅಧುನಿಕ ಕಾಲಘಟ್ಟದಲ್ಲಿ ವ್ರತ್ತಿಪರ ಶಿಕ್ಷಣ ಪಡೆಯುವ ಅಗತ್ಯ ಇದೆ ಎಂದು ಅವರು ಹೇಳಿದರು.
ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ ಸಂಕೇಶರ ಅಧ್ಯಕ್ಷತೆ ವಹಿಸಿದ್ದರು.
ದ.ಕ ಜಿಲ್ಲಾ ಪಂಚಾಯತ್ ಮಾಜಿ‌ ಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ನಾವು ಸಂಘಟಿತರಾಗಿ ಸೇರಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಮ್ಮ ಜನಾಂಗದ ಇತಿಹಾಸ ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು.
ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಮಾಸ್ತ‌ರ್ ಹೊಸಗದ್ದೆ ಧ್ವಜಾರೋಹಣ ನೆರವೇರಿಸಿದರು.
ಮೊಗೇರ ಸಂಘದ ಸ್ಥಾಪಕ ಸದಸ್ಯ ಶುಭೋದಯ ಕೂಡ್ಲು ಸಮಾರಂಭ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ, ಕೊಡಗು ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಶಿವಪ್ಪ ಬಿ.ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ.ರವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೊಗೇರ ದುಡಿಯ ಆಯನದ ಕಾರ್ಯಾಧ್ಯಕ್ಷ ಕರುಣಾಕರ ಪಲ್ಲತಡ್ಕ ಸ್ವಾಗತಿಸಿದರು. ಸಂಚಾಲಕ ಅಶೋಕ್ ಕೊಂಚಾಡಿ ಪ್ರಾಸ್ತಾವಿಕ ಮಾತನಾಡಿದರು.
ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.ಸರೋಜಿನಿ ಶಶಿಧರ್ ದೊಡ್ಡಡ್ಕ ಪ್ರಾರ್ಥಿಸಿದರು.
ಗೌರವ ಸಲಹೆಗಾರ ಮಾಯಿಲಪ್ಪ ಮಾಸ್ತರ್ ವಂದಿಸಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top