ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾ ಅತ್ ವತಿಯಿಂದ ರಂಜಾನ್ ಕಿಟ್ ವಿತರಣೆ

ಸುಳ್ಯ ತಾಲ್ಲೂಕು ಸಮಸ್ತ ಸಂಯುಕ್ತ ಜಮಾ ಅತ್ ವತಿಯಿಂದ ತಾಲೋಕಿನ 15ಜಮಾ ಅತ್ ನ 80ಅರ್ಹ ಕುಟುಂಬ ಗಳಿಗೆ ಆಹಾರದ ಕಿಟ್ ವಿತರಣೆಯು ಸುಳ್ಯ ಸುಪ್ರೀಂ ಹಾಲ್ ನಲ್ಲಿ ಮಾ 1ರಂದು ನಡೆಯಿತು, ಸಮಸ್ತ ಸಂಯುಕ್ತ ಜಮಾ ಅತ್ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್ ಅಧ್ಯಕ್ಷತೆ ವಹಿಸಿದರು, ಕೋಶಾಧಿಕಾರಿ ಹಮೀದ್ ಹಾಜಿ ದುವಾ ನೆರವೇರಿಸಿದರು
ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಿ ನಾವು ವಿತರಿಸುವ ಕಿಟ್ ಗಳು ಅರ್ಹ ಕುಟುಂಬಗಳಿಗೆ ತಲಪಬೇಕು, ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕೆಂದರು ಮುಂದಿನ ವರ್ಷ ದಲ್ಲಿ ಹೆಚ್ಚು ಕಿಟ್ ಗಳನ್ನು ನೀಡುವಂತಾಗಲಿ ಎಂದು ಶುಭ ಹಾರಿಸಿದರು
ಸುಳ್ಯ ತಾಲೋಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮೊಹಮ್ಮದ್, ಸಂಪಾಜೆ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹಮಿದಿಯಾ, ಪೈಂಬ್ಬಚಾಲ್ ಜುಮಾ ಮಸೀದಿ ಅಧ್ಯಕ್ಷ ಸಿ ಎಚ್ ಮೊಹಮ್ಮದ್, ಐವರ್ನಾಡ್ ಜುಮಾ ಮಸೀದಿ ಅಧ್ಯಕ್ಷ ಶರೀಫ್, ದುಗಲಡ್ಕ ಜುಮಾ ಮಸೀದಿ ಕಾರ್ಯದರ್ಶಿ ಹಂಸ ಅಜ್ಮಿರ್, ಪೇರಡಕ್ಕ ಜುಮಾ ಮಸೀದಿ ಕಾರ್ಯದರ್ಶಿ ಕೆ ಎಂ ಇಸ್ಮಾಯಿಲ್, ಅರಂತೋಡು ಜುಮಾ ಮಸೀದಿ ಕೋಶಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಸಂಯುಕ್ತ ಜಮಾ ಅತ್ ಸಂಘಟನಾ ಕಾರ್ಯದರ್ಶಿ ಜಮಾಲ್ ಬೆಳ್ಳಾರೆ, ಸಮಸ್ತ ನೇತಾರಾದ ಹಾಜಿ ಅಹಮದ್ ಸುಪ್ರೀಂ, ಹಾಜಿ ಅಹಮದ್ ಪಾರೆ, ಅಬೂಬಕ್ಕರ್ ಐವರ್ನಾಡ್, ಹಾಜಿ ಅಬ್ದುಲ್ ಖಾದರ್ ಅಜ್ಜಾವರ, ಶರೀಫ್ ರಿಲ್ಯಾಕ್ಸ್, ಎ ಬಿ ಮೊಯಿದಿನ್ ಕಳಂಜ, ಸಿನಾನ್ ದರ್ಕಾಸ್ ಪೇರಡ್ಕ, ಅಬ್ದುಲ್ಲ ಕನಕಮಜಲು, ಇಸ್ಮಾಯಿಲ್ ಸಂಪಾಜೆ,ಮೊದಲಾದವರು ಉಪಸ್ಥಿತರಿದ್ದರು, ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ನಿರೂಪಿಸಿದರು,

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top