ಇಫ್ತಾರ್ ಕೂಟ ಆಯೋಜಿಸಿದ ಮಂಜುನಾಥ ರೈ ಬೇಲ್ಯ ಅವರಿಗೆ ಸನ್ಮಾನ

ಅಜ್ಜಾವರ ಮೇನಾಲ ಜಮಾತ್ ವತಿಯಿಂದ ದಿನಾಂಕ 26 ನೇ ಸೋಮವಾರ ಸಂಜೆ ಮೇನಲದ ವಲಿಯುಲ್ಲಾಹಿ ದುರ್ಗಾ ಶರೀಫ್ ಇದರ ಅಂಕಣದಲ್ಲಿ ಶ್ರೀ ಮಂಜುನಾಥ ರೈ ಬೇಲ್ಯ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಅಜ್ಜಾವರ ಮೇಲದ ಪ್ರತಿಷ್ಠಿತ ಊರೂಸ್ ಸಂದರ್ಭದಲ್ಲಿ ವಿಶೇಷ ಸಹಾಯವನ್ನು ನೀಡುತ್ತಿರುವ ಮಂಜುನಾಥ್ ಬೇಲ್ಯ ಅವರು ಇತ್ತೀಚೆಗೆ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಸೌಹಾರ್ದತೆಯನ್ನು ಮೆರೆದಿದ್ದರು. ಮಂಜುನಾಥ ರೈ ಹೇಳುವಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಾನು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದೇನೆ. ಆದರೆ ನಾನು ಯಾವುದೇ ಸನ್ಮಾನವನ್ನು ಅಪೇಕ್ಷೆ ಮಾಡಿರಲಿಲ್ಲ. ಅವರು ನನಗೆ ಒಳ್ಳೆಯ ರೀತಿಯಲ್ಲಿ ಸನ್ಮಾನಿಸಿ ನನ್ನನ್ನು ಗೌರವಿಸಿದ್ದಾರೆ. ಅವರಿಗೆ ನಾನು ಕೂಡ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದೆ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ಮಾಡುವಲ್ಲಿ ಸಹಕಾರಿಗಳಾಗಲಿ ಎಂಬ ಆಶಯ ನನ್ನದು. ಎಂಬ ವಿಷಯವನ್ನು ಮಂಜುನಾಥ ರೈ ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಜಮಾತಿನ ಅಧ್ಯಕ್ಷರಾದ ರಜಾಕ್ ಪಳ್ಳಿಕೆರೆ ಕಾರ್ಯದರ್ಶಿ ಸೌಕರ್ತಲಿ ಉಸ್ತಾದ ಅಬ್ದುಲ್ ರಹಿಮಾನ್ ಹಾಗೂ ಇತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top