ಸುಳ್ಯ ಜಯನಗರದ ಕೊರಂಬದ್ಕದಲ್ಲಿರುವ ಶ್ರೀ ನಾಗಬ್ರಮ್ಮ ಅದಿಮೊಗೇರ್ಕಳ, ಗುಳಿಗ, ಕೊರಗಜ್ಜ ಕ್ಷೇತ್ರದಲ್ಲಿ ಇತ್ತೀಚೆಗೆ ನೇಮೋತ್ಸವ ಮತ್ತು ಆಡಳಿತ ವ್ಯವಸ್ಥಾಪನ ಸಮಿತಿಯ ಜಂಟಿ ಸಭೆ ನಡೆಯಿತು.
ಸಭೆಯಲ್ಲಿ ಉತ್ಸವ ಸಮಿತಿಯನ್ನು ನೂತನವಾಗಿ ರಚಿಸಲಾಯಿತು.
ಗೌರವಧ್ಯಕ್ಷರಾಗಿ ರಮೇಶ್ ಇರಂತಮಜಲು, ಅಧ್ಯಕ್ಷರಾಗಿ ಸೋಮಶೇಖರ ದೋಳ ಎರಡನೇ ಬಾರಿಗೆ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಪ್ರಸನ್ನ ಕುದ್ಪಾಜೆ, ಉಪಾಧ್ಯಕ್ಷ ದಯಾನಂದ ಕುದ್ಪಾಜೆ. ಖಜಾಂಜಿಯಾಗಿ ಪ್ರಶಾಂತ್ ಕುದ್ಪಾಜೆ ಮತ್ತು ಜೊತೆಕಾರ್ಯದರ್ಶಿಯಾಗಿ ಸಚಿನ್
ಕೊಯಿಂಗೋಡಿ i ಆಯ್ಕೆ ಆದರು.
ಇದೇ ಸಭೆಯಲ್ಲಿ ಮಹಿಳಾ ಸಮಿತಿಯನ್ನೂ ರಚಿಸಲಾಯಿತು. ಮಹಿಳಾ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ಸುಂದರ ಉಪಾಧ್ಯಕ್ಷರಾಗಿ ಶ್ರೀಮತಿ ಸುಮತಿ ನಾಯಕ್ ಸರ್ವನುಮತದಿಂದ ಆಯ್ಕೆ ಆದರು.
ಈ ಸಭೆಯಲ್ಲಿ ಆಡಳಿತ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ನೇಮೋತ್ಸವದ ಬಗ್ಗೆ ಮತ್ತು ವಾರ್ಷಿಕ ವಾಗಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಆಡಳಿತ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಜಗನ್ನಾಥ್ ಜಿ ಅವರು ಕ್ಷೇತ್ರಕ್ಕೆ ಶಾಶ್ವತ ದೇಣಿಗೆಯ ಕರಪತ್ರ ನೀಡಿ ವಿವರಸಿದರು. ಸಭೆಯಲ್ಲಿ ನೇಮೋತ್ಸವ ಮತ್ತು ಆಡಳಿತ ಸಮಿತಿಯ ಸದಸ್ಯರು ಮತ್ತು ಬಕ್ತಾದಿಗಳು ಭಾಗವಹಿಸಿ ಸೂಕ್ತ ಸಲಹೆ ನೀಡಿ ಸಹರಿಸಿದರು.



































