ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ : ಮಾಜಿ ಸಚಿವ ಅಂಗಾರ

ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ,ಸಮಾಜದಲ್ಲಿ ನಾವು ಸ್ವಾಭಿಮಾನಿಗಳಾಗಿ ಬದುಕಬೇಕು,ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಮಾಜಿ ಸಚಿವ ಅಂಗಾರ ಹೇಳಿದರು.
ಗಾಯಕ ಶಶಿಧರ ಕೋಟೆ ರಚಿಸಿ ಹಾಡಿದ ಧ್ವನಿ ಮುದ್ರಿತ ಭಕ್ತಿ ಗೀತೆಯನ್ನು ಅವರು ಮಾ.7ರಂದು ಸೋಣಂಗೇರಿ ಶ್ರೀ ಕ್ರಷ್ಣ ಭಜನಾ ಮಂದಿರದ ವಠಾರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಇಲ್ಲಿಯ ಭಜನಾ ಮಂದಿರ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತೋಷದ ವಿಚಾರ .
ನೂತನ ಭಜನಾ ಮಂದಿರ ಲೋಕಾರ್ಪಣೆಗೆ ನಿಶ್ಚಿತ ದಿನ ನಿಗದಿ ಮಾಡಿ.ಕೆಲಸದಲ್ಲಿ ಬದ್ಧತೆ ಇದ್ದು ಒಗ್ಗಟ್ಟಿನಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯ‌ರ್ ಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಜೇನು ಸೊಸೈಟಿಯ ಅಧ್ಯಕ್ಷ
ಚಂದ್ರ ಕೋಲ್ಟಾರ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಕಾಂತ್‌ ಗೋಲ್ವಲ್ಕ‌ರ್, ಉದ್ಯಮಿ ಲಕ್ಷ್ಮೀನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.ಅತಿಥಿಗಳು ತಮ್ಮ ಕೈಲಾದ ಧನ ಸಹಾಯ ಮಾಡುವ ಭರವಸೆ ನೀಡಿ ಶುಭಹಾರೈಸಿದರು.
ತನ್ನ ಅಜ್ಜಿ ಮನೆಯಲ್ಲಿ ಅಡಿಕೆ ಸುಲಿದು ಸಂಪಾದಿಸಿದ ರೂ. 500/- ನ್ನು ಮಂದಿರದ ಜೀರ್ಣೋದ್ದಾರ ಕಾರ್ಯಕ್ಕೆ ಹರಿಕೇಶ್ ಕುಕ್ಕಾಜೆಕಾನ ಎಂಬ ಬಾಲಕ ಮಂದಿರದ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು.
ಹಂಸಿಕಾ ಮತ್ತು ಸಂಹಿತಾ ಪ್ರಾರ್ಥಿಸಿದರು. ಭಜನಾ ಮಂದಿರದ ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ನಿರಂಜನ ಮಿತ್ತಮಜಲು ವಂದಿಸಿದರು.
ಭಕ್ತಿಗೀತೆಗೆ ಸುಪ್ರಿತ್ ಮೋಂಟಡ್ಕ ನಿರ್ದೇಶನ ಮತ್ತು ಸಂಭಾಷಣೆ ಮಾಡಿದ್ದಾರೆ.ಲೀಲಾವತಿ ಕರುಣಾಕರ ನಡುಮನೆ ಮತ್ತು ಸತ್ಸತ್ಯಶಾಂತಿ ತ್ಯಾಗ ಮೂರ್ತಿ ಸಹಕಾರ ಮಾಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top