ಬಳ್ಪ ಗ್ರಾಮದ ಬುಡೆಂಗಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆ ಕೋಲವು ಎ. 27 ಮತ್ತು 28ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತವು ಮಾ.7 ರಂದು ನಡೆಯಿತು.
ಈ ಸಂದರ್ಭದಲ್ಲಿ ಉದಯಕುಮಾರ್ ಮಾವಿನಕಟ್ಟೆ ಪೂಜಾ ವಿಧಿ ವಿಧಾನ ನೆರವೇರಿಸಿದರು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ಉಪಾಧ್ಯಕ್ಷರಾದ ಉಮೇಶ್ ಬುಡೆಂಗಿ, ನವೀನ್ ಪುಲ್ಲಡ್ಕ, ಕೋಶಾಧಿಕಾರಿ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಆಡಳಿತ ಮೊಕೇಸರರಾದ ಮೋನಪ್ಪ ಬೆಳ್ಳಪ್ಪಾಡ ಬುಡೆಂಗಿ, ಸುಂದರ ಬೆಳ್ಳಪ್ಪಾಡ ಬುಡೆಂಗಿ, ರಾಧಾಕೃಷ್ಣ ಕುಳ, ಕಾರ್ತಿಕ್ ರೈ ಬುಡೆಂಗಿ, ಭಾಸ್ಕರ ಕೊರಪ್ಪಣೆ, ಚಂದ್ರಕಾಂತ್ ಬಳ್ವ ಗಿರಿಧರ ಬಿಕೆರೆ, ಪ್ರೇಮನಾಥ ರೈ ಬುಡೆಂಗಿ, ಹರೀಶ್ ಬಿಕೆರೆ, ರಮೇಶ್ ಆಚಾರ್ಯ ಬಿಕೆರೆ, ನೀಲೇಶ್ವರ ಬಿಕೆರೆ, ಸೀತಾರಾಮ ನಾಳ ಎಣ್ಣೆಮಜಲು, ಪವನ್ ಬಿಕೆರೆ, ನಾರಾಯಣ ಕೊರಪ್ಪಣೆ, ವಿಜಯ ಬುಡೆಂಗಿ ಇತರರು ಉಪಸ್ಥಿತರಿದ್ದರು.
ಬಳ್ಪ : ಬುಡೆಂಗಿ ಶ್ರಿ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮೂಹೂರ್ತ

















