ಧರ್ಮಸ್ಥಳ ವಿರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ಅವರ ಕನಸಿನ ಕೂಸು ಆದ ಧ.ಗ್ರಾ.ಯೋಜನೆಯ ಮೂಲಕ ಇಡೀ ದೇಶಕ್ಕೆ ಮಾದರಿ ರೀತಿಯಲ್ಲಿ ಮನುಷ್ಯ ಯಾರೂ ಸಹ ಯೋಚಿಸದಂತಹ ಅದ್ಭುತ ಕಾರ್ಯಕ್ರಮಗಳನ್ನು ರೂಪಿಸಿ, ಸಾವಿರಾರು ಯೋಜನೆಗಳ ಮೂಲಕ ಜನಮನ್ನಣೆಗಳಿಸುವ ಕೆಲಸಗಳು ನಡೆಯುತ್ತಿದೆ. ಅದರ ಜತೆಗೆ ವಿದ್ಯಾರ್ಥಿಗಳಿಗೆ ಜ್ಞಾನದಾಹಕ್ಕೆ ಪೂರಕವಾಗಿ ಶಾಲಾ ಮಕ್ಕಳಿಗೆ ಟ್ಯೂಷನ್ ತರಗತಿಯೊಂದಿಗೆ ಸಂಸ್ಕಾರಯುತ ಶಿಕ್ಷಣಕ್ಕೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಒತ್ತು ನೀಡುತ್ತಿದೆ ಎಂದು ದ.ಕ ಜಿಲ್ಲಾ ಧ.ಗ್ರಾ.ಯೋಜನೆ ನಿರ್ದೇಶಕ ಬಾಬು ನಾಯ್ಕ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಇದರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿಯ ಸಮಾರೋಪ ಸಮಾರಂಭ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಭಜನಾ ಪರಿಷತ್ ಸದಸ್ಯ, ಜನಜಾಗೃತಿ ವೇದಿಕೆಯ ತಾಲೂಕು ಸದಸ್ಯ ಹಾಗೂ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಜತೆಕಾರ್ಯದರ್ಶಿ ಜಯರಾಮ ರೈ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅಥಿತಿಗಳಾಗಿ ಧ.ಗ್ರಾ.ಯೋಜನೆಯ ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಾಲ್ಸೂರು ವಲಯ ಅಧ್ಯಕ್ಷ ಭಾಸ್ಕರ ಅಡ್ಕಾರ್, ಧ.ಗ್ರಾ.ಯೋಜನೆಯ ಅಡ್ಕಾರು ಒಕ್ಕೂಟ ಅಧ್ಯಕ್ಷ ಗಣೇಶ್, ಮೇಲ್ವಿಚಾರಕಿ ಜಯಶ್ರೀ, ಪಯಸ್ವಿನಿ ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಮೀನಕುಮಾರಿ, ಟ್ಯೂಷನ್ ಶಿಕ್ಷಕ ಕುಮಾರ್ ಲಮಾಣಿ ಇದ್ದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಲಕ್ಷ್ಮೀ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು.
(ಬಾಕ್ಸ್)ಧ.ಗ್ರಾ.ಯೋಜನೆ ಟ್ಯೂಷನ್ ತರಭೇತಿಯ ಗೌರವಧನವನ್ನು ಶಾಲಾ ಧತ್ತಿನಿಧಿಗೆ ಶಿಕ್ಷಕ ಕುಮಾರ್ ಲಮಾಣಿ ಕೊಡುಗೆ : ಮೂರು ತಿಂಗಳ ಕಾಲ ನಡೆಯುವ ಟ್ಯೂಷನ್ ತರಭೇತಿಯನ್ನು ಪಯಸ್ವಿನಿ ಪ್ರೌಢಶಾಲಾ ಶಿಕ್ಷಕ ಕುಮಾರ್ ಲಮಾಣಿಯವರು ಪೂರೈಸಿದ್ದು, ಅದಕ್ಕೆ ಧ.ಗ್ರಾ.ಯೋಜನೆಯಿಂದ ನೀಡಿದ್ದ ಗೌರವಧನವನ್ನು ಶಾಲಾ ಧತ್ತಿನಿಧಿಗೆ ಕೊಡುಗೆಯಾಗಿ ನೀಡಿದರು. ಈ ಧತ್ತಿನಿಧಿಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಜತೆ ಕಾರ್ಯದರ್ಶಿ ಜಯರಾಮ ರೈ ಹಾಗೂ ಶಾಲಾ ಮುಖ್ಯಶಿಕ್ಷಕರಿಗೆ ಹಸ್ತಾಂತರಿಸಲಾಯಿತು.
ಟ್ಯೂಷನ್ ತರಭೇತಿಯ ಬಗ್ಗೆ ಶಾಲಾ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಚಂದ್ರಕಲಾ, ಒಕ್ಕೂಟ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಶಿವಪ್ರಕಾಶ ಕೆ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ಕುಮಾರ ವಂದಿಸಿದರು.
ಜಾಲ್ಸೂರು : ತಾಲೂಕು ಮಟ್ಟದ ಟ್ಯೂಷನ್ ತರಗತಿ ಸಮಾರೋಪ ಸಮಾರಂಭ



































