ಜಾಲ್ಸೂರು : ಅಖಂಡ ಭಜನಾ ಸಂಕಿರ್ತನೆಗೆ ಚಾಲನೆ

ಇಂದು ಸುಳ್ಯ ತಾಲೂಕಿನ ಜಾಲ್ಸುರಿನ ಶ್ರೀ ಪ್ರಸನ್ನ ಆಂಜನೇಯ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯ ಚೈತನ್ಯ ಬ್ರಹ್ಮಕಲಶೋತ್ಸವದ ಅಂಗವಾಗಿ 48 ಗಂಟೆಗಳ ಅಖಂಡ ಭಜನಾ ಸಂಕೀರ್ತನ ಕಾರ್ಯಕ್ರಮವು ಶ್ರೀ ಪ್ರಸನ್ನ ಆಂಜನೇಯನ ಸಾನಿಧ್ಯದಲ್ಲಿ ಪ್ರಾರಂಭವಾಯಿತು.
ಅಖಂಡ ಭಜನಾ ಸಂಕೀರ್ತನೆಯ ಪ್ರಾರಂಭವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕಿನ ಸದಸ್ಯರು ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷರು ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸುರು ವಲಯದ ನಿರ್ದೇಶಕರಾದ ಶ್ರೀ ಜಯರಾಮ ರೈ ರವರು ಮುಂಜಾನೆ 6:52 ನಿಮಿಷಕ್ಕೆ ದೀಪ ಪ್ರಜ್ವಲಿಸುವುದರ ಮುಖಾಂತರ ಪ್ರಾರಂಭಿಸಿದರು.
ಈ ಸಂಧರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕಿನ ಅಧ್ಯಕ್ಷರಾದ ಸೋಮಶೇಖರ ಪೈಕ, ಚೈತನ್ಯ ಬ್ರಹ್ಮ ಕಲಶೋತ್ಸವದ ಅಧ್ಯಕ್ಷರಾದ ಶ್ರೀ ವಿವೇಕ ರೈ, ಯೋಜನಾಧಿಕಾರಿಯಾದ ಶ್ರೀ ಮಾಧವ ಗೌಡ, ದೇವಸ್ಥಾನದ ಅರ್ಚಕರಾದ ಕೃಪಾಧರ,ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸುರು ವಲಯದ ಅಧ್ಯಕ್ಷರಾದ ಶ್ರೀ ಜಯರಾಮ ಅಡ್ಕಾರು, ಜಾಲ್ಸೂರು ಒಕ್ಕೂಟದ ಅಧ್ಯಕ್ಷರಾದ ಶ್ರೀ ಗಣೇಶ, ನಿರ್ದೇಶಕರಾದ ಶ್ರೀ ಚಂದ್ರಶೇಖರ ಬೆಳ್ಳಿಪ್ಪಾಡಿ , ಮದಿಮಾಳುಮುಖ ಶ್ರೀ ದುರ್ಗಾದೇವಿ ಅಮ್ಮನವರು ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾದ ವಾಸುದೇವರವರು, ಶ್ರೀ ಪ್ರಸನ್ನ ಅಂಜನೇಯ ಭಜನಾ ಮಂಡಳಿ ಅಂಜನಾದ್ರಿಯ ಸದಸ್ಯರುಗಳಾದ ವಿನೋದ, ಆಕಾಶ, ಲಕ್ಷ್ಮೀಶ, ಸೇವಾ ಪ್ರತಿನಿಧಿಯಾದ ಚಂದ್ರಕಲಾ ರವರು, ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಾರಂಭದ ಭಜನೆಯನ್ನು ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರ ಜಾಲ್ಸುರಿನ ಮಜಕರಿಂದ ನಡೆಸಲಾಯಿತು ಇಂದಿನಿಂದ ಅಂದರೆ ದಿನಾಂಕ 7-3-26 ಬೆಳಗ್ಗೆ 6:52 ರಿಂದ ದಿನಾಂಕ 9-3-26 ಬೆಳಗ್ಗೆ 6:52 ವರೆಗೆ ಸುಮಾರು 48 ಗಂಟೆಗಳ ಕಾಲ ನಿರಂತರ ಭಜನ ಸೇವೆ ನಡೆಯಲಿದೆ.
ಇದರ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ಪ್ರಸನ್ನ ಅಂಜನೇಯ ಭಜನಾ ಮಂಡಳಿ ಅಂಜನಾದ್ರಿ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಜಾಲ್ಸುರು ವಲಯ, ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಜಾಲ್ಸುರು ವಲಯದವರು ನಿರ್ವಹಿಸಲಿದ್ದಾರೆ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top