ತೊಡಿಕಾನ : ಮಕ್ಕಳ ಸಂತೆಯಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸಿದ ವಿದ್ಯಾರ್ಥಿಗಳು

ತೊಡಿಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ‘ ಮಕ್ಕಳ ಸಂತೆ’ ಮಾರ್ಚ್ 7 ರಂದು ನಡೆಯಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ಗಂಗಾಧರ್ ಮಕ್ಕಳ ಸಂತೆಯನ್ನು ಉದ್ಘಾಟಿಸಿದರು . ಅರಂತೋಡು ತೋಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ , ಎಸ್ ಡಿ ಎಂ ಸಿ ಅಧ್ಯಕ್ಷ ನವೀನ್ ಅಮೆಮನೆ, ಉಪಾಧ್ಯಕ್ಷೆ ಸೌಮ್ಯ ಭಟ್ ಹಾಗೂ ಮಕ್ಕಳ ಪೋಷಕರು ಎಸ್ ಡಿ ಎಂ ಸಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಅರುಣ್ ಕುಮಾರ್ ಎಂ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ತಹಶಿಕ್ಷಕರಾದ ಶ್ರೀಮತಿ ಸ್ನೇಹಲತಾ, ಬಲರಾಜ್, ಶ್ರೀಮತಿ ಮಮತಾ, ಶ್ರೀಮತಿ ನಾಗವೇಣಿ, ಕುಮಾರಿ ವಿದ್ಯಾ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಮಕ್ಕಳ ಸಂತೆಯಲ್ಲಿ ಮಕ್ಕಳು ತಮ್ಮ ಮನೆಯಿಂದ ತಂದ ಆಹಾರ ಸಾಮಗ್ರಿಗಳು, ತರಕಾರಿ ಹಣ್ಣು ಹಂಪಲು ಇತರ ವಸ್ತುಗಳನ್ನು ಮಾರಾಟ ಮಾಡಿ ವ್ಯವಹಾರದ ಕೌಶಲ್ಯವನ್ನು ಪಡೆದುಕೊಂಡರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top