ಅರೆಭಾಷೆ ಗ್ರಾಮೋತ್ಸವದ ಮೂಲಕ ಅರೆಭಾಷಿಕರ ಸಂಸ್ಕೃತಿಗಳನ್ನು ಉಳಿಸುವ ಕಾರ್ಯ ನಡೆಯುತ್ತಿದೆ: ಸದಾನಂದ ಮಾವಜಿ

ಅರೆಭಾಷೆ ಗ್ರಾಮೋತ್ಸವದ ಮೂಲಕ ಅರೆಭಾಷಿಕರ ಸಂಸ್ಕೃತಿಗಳನ್ನು ಉಳಿಸುವ ಕಾರ್ಯ ನಡೆಯುತ್ತಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮಡಪ್ಪಾಡಿಯ ಗ್ರಾಮ ಗೌಡ ಸಮಿತಿ ಮತ್ತು ಗೌಡ ಮಹಿಳಾ ಘಟಕಗಳ ಜಂಟಿ ಆಶ್ರಯದಲ್ಲಿ ಮಡಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.8ರಂದು ಒಂದು ದಿನದ ‘ಅರೆಬಾಸೆ ಗ್ರಾಮೋತ್ಸವ -2026’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರೆಭಾಷೆ ಸಾಹಿತ್ಯದ ಮೂಲಕ ಅರೆಭಾಷೆ ಉಳಿಸುವ ಕಾರ್ಯ ನಡೆಯುತ್ತಿದೆ‌.ಈಗಾಲೇ ನಾವು 79 ಪುಸ್ತಕಗಳನ್ನು ಅಕಾಡೆಮಿಯಿಂದ ಪ್ರಕಟಿಸಲಾಗಿದ್ದು ಇನ್ನೂ 14 ಪುಸ್ತಕನ್ನು ಮುಂದಿನ ವಾರ ಪ್ರಕಟಿಸಲಿದ್ದೇವೆ ಎಂದು ಹೇಳಿದರು.
ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪಿ.ಸಿ. ಜಯರಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸ್ಥಾಪನೆಯಾದ ಬಳಿಕ ಅರೆಭಾಷೆಯ ಮೇಲಿನ ಗೌರವ ಹೆಚ್ಚಾಗಿದೆ.ಅರೆಭಾಷಿಕರ ಮೇಲಿನ‌ ಗೌರವ ಹೆಚ್ಚಾಗಲು ಇದಕ್ಕೆ ಅಕಾಡೆಮಿ ಕಾರಣವಾಗಿದೆ.ಅರೆಭಾಷೆಯ ಬೆಳವಣಿಗೆಗೆ ಅಕಾಡೆಮಿಯ ಪೂರ್ವ ಅಧ್ಯಕ್ಷರು ಒಳ್ಳೆಯ ಅಡಿಪಾಯ ಹಾಕಿ ಕೊಟ್ಟಿದ್ದಾರೆ.ಅರೆಭಾಷೆ ಅಕಾಡೆಮಿಯ ಸ್ಥಾಪನೆ ನಮ್ಮವರೆ ಆದ ಡಿ.ವಿ ಸದಾನಂದ ಗೌಡರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಿದೆ.ಅವರನ್ನು ನಾವು ನೆನಪಿಸಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ, ಮಡಪ್ಪಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನಯ್ ಮುಳುಗಾಡು, ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್ ಮತ್ತು ಮಡಪ್ಪಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸದಾನಂದ ಬಲ್ಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ವೇದಿಕೆಯಲ್ಲಿ ಸದಸ್ಯ ಸಂಚಾಲಕರಾದ ಲತಾ ಪ್ರಸಾದ್ ಕುದ್ಪಾಜೆ,ಅಕಾಡೆಮಿ ಸದಸ್ಯರಾದ ತೇಜಕುಮಾರ್ ಕುಡೆಕಲ್ಲು,ಚಂದ್ರಶೇಖರ ಪೇರಾಲ್,ಚಂದ್ರಾವತಿ ಬಡ್ಡಡ್ಕ,ಪಿ.ಎಸ್ ಕಾರ್ಯಪ್ಪ,ಲೋಕೇಶ್ ಊರುಬೈಲ್,ವಿನೋದ್ ಮೂಡಗದ್ದೆ,ಸೂದನ ಈರಪ್ಪ,ಗೋಪಾಲ್ ಪೆರಾಜೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಪೂರ್ವಾಹ್ನ ಗಂಟೆ 9.30ಕ್ಕೆ ಮಡಪ್ಪಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಬಳ್ಳಡ್ಕರವರು ವಿವಿಧ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು‌.ಕೃಷಿ ಮತ್ತು ಕೃಷಿ ಸಂಬಂಧಿಸಿದ ಕೌಶಲ್ಯಮಯ ಕೆಲಸಗಳಾದ ಬುಟ್ಟಿ ಹೆಣೆಯುದು, ಗೆರಸೆ ತಯಾರಿ, ತೆಂಗಿನ ಗರಿಗಳಿಂದ ವಿವಿಧ ಬಗೆಯ ಪರಿಕರಗಳನ್ನು ತಯಾರಿಸುವುದು ಹಾಗೂ ಅರೆಭಾಸಿಕರು ತಮ್ಮ ದಿನನಿತ್ಯದ ಕೆಲಸಕ್ಕೆ ಉಪಯೋಗಿಸುತ್ತಿದ್ದ ಫಪರಿಕರಗಳ ಪ್ರಾತ್ಯಕ್ಷಿಕೆಗಳನ್ನು ಪ್ರಗತಿಪರ ಕೃಷಿಕರಾದ ಕೇಪಣ್ಣ ಗೌಡ ಅಂಬೆಕಲ್ಲು ಉದ್ಘಾಟಿಸದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರರಿಂದ ಅರೆಬಾಸೆ ಪದ್ಯ ಗೊಂಚ್‌ಲ್ (ಆರ್ಕೆಸ್ಟ್ರಾ), ಕುಣಿತ ಮತ್ತು ವಿವಿಧ ಸ್ಪರ್ಧೆಗಳು ನಡೆಯಿತು.ದಿನೇಶ್ ಮಡಪ್ಪಾಡಿ ಮತ್ತು ಉದಯಭಾಸ್ಜರ ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

i

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top