ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ 2026 ಖರ್ಚು ವೆಚ್ಚಗಳ ಸಭೆ ಮಾ.9ರಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ಇವರ ಅಧ್ಯಕ್ಷತೆಯಲ್ಲಿ ದೇಗುಲದಲ್ಲಿ ಜರುಗಿತು ವೇದಿಕೆಯಲ್ಲಿ ವ್ಯವಸ್ತಾಪನ ಸಮಿತಿಯ ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕಳ, ಪರಮೇಶ್ವರ ಗೌಡ ಬಿಳಿಮಲೆ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಫಲತಡ್ಕ ಮೈಲಪ್ಪ ಗೌಡ ಎಣ್ಮೂರು ಪಟ್ಟೆ, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕಡ, ಮಾಲಿನಿ ಕುದ್ವ, ಪವಿತ್ರ ಮಲ್ಲೆಟಿ ಹಾಗೂ ಪೈಂದೋಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಗೌಡ ಕುದ್ವ ಉಪಸ್ಥಿತರಿದ್ದರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಎಲ್ಲರನ್ನೂ ಸ್ವಾಗತಿಸಿ ಜಾತ್ರೋತ್ಸವದ ಯಶಸ್ವಿಗೆ ಕಾರಣರಾದ ವಿವಿಧ ಸಮಿತಿಯ ಸಂಚಾಲಕರುಗಳಿಗೆ, ಸದಸ್ಯರುಗಳಿಗೆ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಸದಸ್ಯರುಗಳೀಗೆ ಹಾಗೂ ಜಾತ್ರೋತ್ಸವಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳಿಗೆ ಹಾಗೂ ದೇಣಿಗೆ ನೀಡಿದ ಭಕ್ತಾಭಿಮಾನಿಗಳಿಗೆ ವಂದನೆಗಳನ್ನು ಸಲ್ಲಿಸಿದರು ಖರ್ಚು ವೆಚ್ಚಗಳ ಬಗ್ಗೆ ಸಭೆಗೆ ತಿಳಿಸಿದರು ಜಾತ್ರೋತ್ಸವದ ಓಟ್ಟು ಆದಾಯ ರೂ. 28,37,697 ಆಗಿದ್ದು ಒಟ್ಟು ಖರ್ಚು ರೂ. 25,19,186 ಆಗಿದ್ದು ಉಳಿಕೆ ರೂ. 3,18,511 ಆಗಿರುತ್ತದೆ
ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಗಂಗಾಧರ ಗುಂಡಡ್ಕ, ರಜಿತ್ ಭಟ್ ಪಂಜ ಬೀಡು, ಹಾಗೂ ಊರ ಭಕ್ತಾಭಿಮಾನಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು ಈ ಸಂದರ್ಭ ರೂಪಾಯಿ ಎಣಿಕೆ ಮಾಡುವ ಮೆಷಿನ್ ಒಂದನ್ನು ದೇಗುಲಕ್ಕೆ ಕೊಡುಗೆಯಾಗಿ ಶ್ರೀ ಪರಮೇಶ್ವರ ಗೌಡ ಬಿಳಿಮಲೆ ಮತ್ತು ಲೋಕನಾಥ ಕೆ.ಬಿ ಕುದ್ವ ದೇಗುಲಕ್ಕೆ ಕೊಟ್ಟರು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ವಂದನಾರ್ಪಣೆಗೆದರು
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ 2026 ಖರ್ಚು ವೆಚ್ಚಗಳ ಸಭೆ

















