ಸುಳ್ಯದ ಶ್ರೀ ಕಲ್ಕುಡ ದೈವಸ್ಥಾನದ ನೂತನ ಶಿಲಾಮಯ ಗುಡಿಯ ನಿರ್ಮಾಣದ ಪೂರ್ವ ಭಾವಿಯಾಗಿ ಶ್ರೀ ಕಲ್ಕುಡ,ಕಲ್ಲುರ್ಟಿ ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಮಾ. 9 ರಂದು ಜರುಗಿತು.
ದೇಲಂಪಾಡಿ ಬ್ರಹ್ಮಶ್ರೀ ವೇದಮೂರ್ತಿ ಗಣೇಶ್ ತಂತ್ರಿ ಯವರ ಮಾರ್ಗದರ್ಶನದಲ್ಲಿ ಪೂರ್ವಾಹ್ನ ಸಾನಿಧ್ಯದಲ್ಲಿ ವೈದಿಕ ಕಾರ್ಯಕ್ರಮ ನಡೆದು 10.47 ರ ಮುಹೂರ್ತದಲ್ಲಿ ಪ್ರಾರ್ಥನೆ ನೆರವೇರಿಸಿ ಮೂಲಸ್ಥಾನದ ಗುಡಿಯಿಂದ ಶ್ರೀ ಕಲ್ಕುಡ ಮತ್ತು ಸಹಪರಿವಾರ ದೈವಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಅಭಿಷೇಕವಾಗಿ ಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತು. ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊತ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ,ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ಪಿ. ಕೆ. ಉಮೇಶ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು, ಆಡಳಿತ ಸಮಿತಿಯ ಸದಸ್ಯರುಗಳಾದ ಭಾಸ್ಕರ ಐಡಿಯಲ್, ಚಂದ್ರಶೇಖರ ಪಿ. ಆರ್, ಸೋಮನಾಥ ಪೂಜಾರಿ,ಕೇಶವ ನಾಯಕ್, ದಿನೇಶ್ ಕುಮಾರ್ ಕೆ. ಸಿ, ಸತ್ರಪ್ರಸಾದ್ ಕೆ, ಹರೀಶ್ ಬೂಡುಪನ್ನೆ ಪ್ರಕಾಶ್ ಹೆಗ್ಡೆ, ಎನ್.ಜಯಪ್ರಕಾಶ್ ರೈ,
ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ಡಾ. ಗಿರೀಶ್ ಭಾರದ್ವಾಜ್,ವೆಂಕಪ್ಪ ಗೌಡ ಎಂ,
ರಾಮಚಂದ್ರ ಆಗೋ,
ದಿನೇಶ್ ಮಡಪ್ಪಾಡಿ, ಗಿರೀಶ್ ದೇಂಗೋಡಿ,ಅಶೋಕ ಪ್ರಭು ಸುಳ್ಯ, ಅವಿನಾಶ್ ಕುರುಂಜಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು,ಭಕ್ತಾಧಿಗಳು. ಉಪಸ್ಥಿತರಿದ್ದರು.
ಸುಳ್ಯ : ಕಲ್ಕುಡ,ಕಲ್ಲುರ್ಟಿ ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ

















