ಕೆಎಸ್ಸಾರ್ಟಿಸಿ ಬಸ್ಸು ಮತ್ತು ಕಾರಿನ ನಡುವೆ ಮಾ.13ರಂದು ಕಡಬ ತಾಲೂಕಿನ ಗುಂಡ್ಯ ಸಮೀಪ ಅಪಘಾತ ಸಂಭವಿಸಿ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಗುಂಡ್ಯ ಗಡಿ ದೇವಸ್ಥಾನದ ಸಮೀಪ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.ಕಾರಿನಲ್ಲಿದ್ದವರು ಬೆಳ್ತಂಗಡಿ ಕೊಕ್ಕಡ ನಿವಾಸಿಗಳು ಎಂದು ತಿಳಿದು ಬಂದಿದೆ.
ಗುಂಡ್ಯ : ಕಾರು ಕೆಎಸ್ಸಾರ್ಟಿಸಿ ಬಸ್ಸು ಅಪಘಾತ,ಮೂವರು ಸಾವು




































