ತನ್ನ ಹುಟ್ಟೂರಿನಲ್ಲಿ ಸಂಘಟಕ ದಿನೇಶ್ ಮಡಪ್ಪಾಡಿಯವರಿಗೆ ಸನ್ಮಾನ

ಮಾರ್ಚ್ 8 ರಂದು ಕರ್ನಾಟಕ ಸರ್ಕಾರ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ. ಗ್ರಾಮ ಗೌಡ ಸಮಿತಿ ಮತ್ತು ಗ್ರಾಮ ಗೌಡ ಮಹಿಳಾ ಘಟಕ ಮಡಪ್ಪಾಡಿ ಇವರ ಆಶ್ರಯದಲ್ಲಿ ಮಡಪ್ಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೊಳ್ಳಾಡಿ ತಮ್ಮಯ್ಯ ಗೌಡ ರಂಗಮಂದಿರದಲ್ಲಿ ನಡೆದ “ಅರೆಬಾಸೆ ಗ್ರಾಮೋತ್ಸವ – 2026” ರ ಅದ್ದೂರಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಂಘಟಕ, ಮಾರ್ಗದರ್ಶಕ ನ್ಯಾಯವಾದಿ ದಿನೇಶ್ ಮಡಪ್ಪಾಡಿಯವರನ್ನು ಸನ್ಮಾನಿಸಲಾಯಿತು.
ಸಕ್ರಿಯ ಸಾಮಾಜಿಕ ಕಾರ್ಯಕರ್ತನಾಗಿ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಶಸ್ತಿ ಸನ್ಮಾನಗಳಿಂದ ದೂರವಿದ್ದು ಸಮಾಜ ಸೇವೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕ್ರಿಯಾಶೀಲ ವ್ಯಕ್ತಿತ್ವದ, ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ ಬೆಳೆಸಿದ ಸೃಜನಾತ್ಮಕ ವ್ಯಕ್ತಿಯಾದ ನ್ಯಾಯವಾದಿ ಆಗಿರುವ ದಿನೇಶ್ ಮಡಪ್ಪಾಡಿಯವರನ್ನು‌ ಅವರ ಹುಟ್ಟೂರಾದ ಮಡಪ್ಪಾಡಿ ಗ್ರಾಮದಲ್ಲಿ ಅಕಾಡೆಮಿ ವತಿಯಿಂದ ಗೌರವಿಸಿ ಸನ್ಮಾನಿಸಿರುವುದಕ್ಕೆ ಅವರ ಮಿತ್ರರು ಅಭಿಮಾನಿಗಳು ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top