ಸುಳ್ಯದ ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ 2 ನೇ ವರ್ಷದ ಗ್ರಾಜುವೇಶನ್ ಡೇ ಯನ್ನು ಮಾ.14ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪಿ. ಎ. ಮೇದಪ್ಪ ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ ಶಾಲೆಯ ಕಾರ್ಯವನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಮೇದಪ್ಪರವರನ್ನು ಶಾಲಾ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಅಂಜಲಿ ಮಾಂಟೆಸ್ಸೋರಿ ಶಾಲೆಯ ಅಧ್ಯಕ್ಷರಾದ ಶುಭಕರ್ ಬಿ. ಸಿ. ಅಧ್ಯಕ್ಷತೆ ವಹಿಸಿದ್ದರು. ಸಂದರ್ಭದಲ್ಲಿ ಸಂಚಾಲಕಿ ಗೀತಾಂಜಲಿ ಟಿ. ಜಿ. ಉಪಸ್ಥಿತರಿದ್ದರು., ಪುಟ್ಟ ಪದವೀಧರ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು.
ಪದವಿ ವೇಷಭೂಷಣ ಧರಿಸಿದ ಪುಟ್ಟ ಮಕ್ಕಳು ಸಂತೋಷದಿಂದ ತಮ್ಮ ಪ್ರಮಾಣಪತ್ರ ಮೇಡಲ್ ಗಳನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಸಂಭ್ರಮವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.
ಎಲ್. ಕೆ. ಜಿ ಪುಟಾಣಿಗಳು ತಮ್ಮ ಯು. ಕೆ. ಜಿ ಪುಟಾಣಿಗಳಿಗೆ ಹಣ್ಣು , ಫ್ರೂಟ್ ಸಲಾಡ್, ಹಾಗೂ ಸಿಹಿ ಹಂಚಿದರು.
ಕಾರ್ಯಕ್ರಮ ದಲ್ಲಿ ಪುಟಾಣಿ ಪ್ರೇರಿತ್ ಪ್ರಾರ್ಥಿಸಿ , . ನಿರ್ಮಲ ಸ್ವಾಗತಿಸಿ, . ರೂಪಾ ವಂದಿಸಿದರು.ಫಬೀದಾ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ : ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ 2 ನೇ ವರ್ಷದ ಗ್ರಾಜುವೇಶನ್ ಡೇ ಆಚರಣೆ


















