ರಾಜ್ಯದಲ್ಲಿ 2026ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ. ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನ ಅತ್ಯಂತ ಪ್ರಮುಖ ಹಂತವಾಗಿದೆ. ಈ ಹಂತವು ಅವರ ಭವಿಷ್ಯದ ಗುರಿಗಳನ್ನು ರೂಪಿಸಿಕೊಳ್ಳಲು ದಾರಿದೀಪವಾಗುತ್ತದೆ.
ಈ ಸಂದರ್ಭದಲ್ಲಿ ಪೋಷಕರ ಜವಾಬ್ದಾರಿ ಮತ್ತು ಶಿಕ್ಷಕರ ಪ್ರೇರಣೆಯಿಂದ ಕೂಡಿದ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಪೋಷಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರದೇ, ಒತ್ತಡ ನೀಡದೇ, ಪ್ರೀತಿ ಮತ್ತು ನಂಬಿಕೆಯಿಂದ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
ಇನ್ನೊಂದೆಡೆ, ಶಿಕ್ಷಕರು ತರಗತಿ ಕೊಠಡಿಗಳಲ್ಲಿ ಪಾಠಗಳ ಜೊತೆಗೆ ಜೀವನ ಮೌಲ್ಯಗಳನ್ನು ಬೋಧಿಸಿ, ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಮನೋಭಾವವನ್ನು ರೂಪಿಸುತ್ತಾರೆ. ಹಾಗೆಯೇ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಗುರುತಿಸಿ, ಅವರಿಗೆ ತಕ್ಕ ರೀತಿಯಲ್ಲಿ ಮಾರ್ಗದರ್ಶನ ನೀಡಿ ನಿರಂತರವಾಗಿ ಪ್ರೇರೇಪಿಸುತ್ತಾರೆ.
ಒಟ್ಟಿನಲ್ಲಿ, ಪೋಷಕರ ಆಶೀರ್ವಾದ ಮತ್ತು ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ದೀಪಗಳಾದರೆ, ಅಂತಿಮ ಯಶಸ್ಸು ವಿದ್ಯಾರ್ಥಿಗಳ ಬಲವಾದ ಇಚ್ಚಾಶಕ್ತಿ, ಪರಿಶ್ರಮ ಮತ್ತು ಆತ್ಮವಿಶ್ವಾಸದಲ್ಲಿದೆ.
ಆದ್ದರಿಂದ, ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ – ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ.
ಜೇಸಿ ಮೋಹನ್ ಚಂದ್ರ
ಉಪನ್ಯಾಸಕರು
ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಅರಂತೋಡು
ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ – ಯಶಸ್ಸು ನಿಮ್ಮದಾಗಲಿ




































