ಜೆಸಿಐ ಸುಳ್ಯ ಪಯಸ್ವಿನಿ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ ಸಮಾರಂಭ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಮಾ.17ರಂದು ನಡೆಯಿತು.
ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಸ್ವಾಗತ್ ಐಸ್ ಕ್ರೀಂ ಸಂಸ್ಥೆಯ ಮಾಲಕಿ ಶ್ರೀಮತಿ ಶಶಿಕಲಾ ಪ್ರಭಾಕರನ್ ನಾಯರ್ ರಿಗೆ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್’ ನೀಡಿ ಗೌರವಿಸಲಾಯಿತು
ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ ಪ್ರಶಸ್ತಿ ಪ್ರದಾನಗೈದರು. “ಉದ್ಯಮ ನಡೆಸುವುದು ಹಲವು ಸವಾಲುಗಳು ಎದುರಾಗುತ್ತವೆ. ಎಲ್ಲಾ ಸವಾಲುಗಳನ್ನು ಮೀರಿ ಶಶಿಕಲಾರವರು ಯಶಸ್ವಿಯಾಗಿರುವುದು ಶ್ಲಾಘನೀಯ. ಮತ್ತು ಅವರು ಸಮಾಜಕ್ಕೆ ಪ್ರೇರಣೆ” ಎಂದು ಹೇಳಿದರು.
ಜೇಸಿಐ ಸುಳ್ಯ ಪಯಸ್ವಿನಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಅಭಿನಂದನಾ ಮಾತನ್ನಾಡಿದರು. “ಮಹಿಳೆಯರಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡಿದರೆ ಹೇಗೆ ಬೆಳೆಯಬಹುದೆಂಬುದಕ್ಕೆ ಸ್ವಾಗತ್ ಸಂಸ್ಥೆಯ ಶಶಿಕಲಾಕ್ಕ ನಿದರ್ಶನ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ವಿಜಯ ಅಮೆಚೂರು ಶುಭಹಾರೈಸಿದರು.
ಉಮೇಶ್ ಬೊಳುಗಲ್ಲು ಜೇಸಿವಾಣಿ ವಾಚಿಸಿದರು. ವಿನೋದ್ ಮೂಡಗದ್ದೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ತಾರಾ ಮಾಧವ ಚೂಂತಾರು ವಂದಿಸಿದರು.
ಜೆಸಿಐ ಸುಳ್ಯ ಪಯಸ್ವಿನಿ : ಮಹಿಳಾ ದಿನಾಚರಣೆ



















