ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏಪ್ರಿಲ್ 13 ರಿಂದ 20 ರ ತನಕ ವೈಭವದಿಂದ ನಡೆಯಲಿದ್ದು ಜಾತ್ರೋತ್ಸವವನ್ನು ಅದ್ದೂರಿಯಾಗಿ ನಡೆಸಲು ಜಾತ್ರೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಬಿಡುಗಡೆ ಸಮಾರಂಭ ದೇವಳದ ಅಕ್ಷಯ ಮಂದಿರದಲ್ಲಿ ಮಾ.19ರಂದು ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಸಭೆಯ ಅಧ್ಯಕ್ಷತೆ ವಹಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಜಾತ್ರೋತ್ಸವಕ್ಕೆ ಉಪಸಮಿತಿಗಳು ಯಾವ ರೀತಿ ತಯಾರಿ ನಡೆಸಬೇಕೆಂದು ಮಾಹಿತಿ ನೀಡಿದರು.ವಿವಿಧ ಉಪಸಮಿತಿಯವರು ಸಲಹೆ ಸೂಚನೆಗಳನ್ನು ನೀಡಿದರು.
ಆರ್ಥಿಕ ಸಮಿತಿ ಸಂಚಾಲಕ ಯು. ಎಂ. ಕಿಶೋರ್ ಕುಮಾರ್ ಉಳುವಾರು, ಹಸಿರು ವಾಣಿ ಸಂಚಾಲಕ ಕೇಶವ ಅಡ್ತಲೆ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಎಸ್. ಪಿ. ಲೋಕನಾಥ್ ,ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಲತಿ ಬೋಜಪ್ಪ,ಚಂದ್ರಕಲಾ ಕುತ್ತಮೊಟ್ಟೆ,ರವೀಂದ್ರ ಪೂಜಾರಿ,ವೆಂಕಟ್ರಮಣ ಪೆತ್ತಾಜೆ,ಸುಂದರ ಬಾಜಿನಡ್ಕ,ಕೇಪು ದೊಡ್ಡಕುಮೇರಿ,ಭಾರತಿ ಪುರುಶೋತ್ತಮ,ಮಾಲಿನಿ ವಿನೋದ್,ಭವಾನಿ ಚಿಟ್ಟನ್ನೂರು,ವಿಜೇತ್ ಮರುವಳ,ದೇವಪ್ಪ ಹೈದಂಗೂರು,ರಾಧಕ್ರಷ್ಣ ಪಾರೆಮಜಲು,ಮಹೇಶ ಕುತ್ತಮೊಟ್ಟೆ,ಚಿದಾನಂದ ಕಾಡುಪಂಜ,ವಸಂತ ಪೆಲ್ತಡ್ಕ,ತಿಮ್ಮಯ್ಯ ಮೆತ್ತಡ್ಕ,ರೀನಾ ಜೋಡಿಪಣೆ,ಪುಷ್ಪಾ ಮೇದಪ್ಪ,ಉಮಾಶಂಕರ ಎ.ಜಿ,ಕೆ.ಕೆ ನಾರಾಯಣ ಕುಂಟುಕಾಡು,ಸೋಮಶೇಖರ ಪೈಕ,ಭವಾನಿಶಂಕರ ಅಡ್ತಲೆ,ಜಯಪ್ರಕಾಶ್ ಉರುಂಡೆ,ಬಿ.ಜನಾರ್ಧನ,ಗಣಪತಿ ಭಟ್ ಪಾದೆಕಲ್ಲು,ಸತೀಶ,ತೀರ್ಥರಾಮ ಅಡ್ಕಬಳೆ,ಬಿ.ರಾಘವ,ರಂಜಿತ್ ಅಡ್ತಲೆ,ಧನಂಜಯ ಕಲ್ಲಗದ್ದೆ,ಗೋವರ್ಧನ ಬೊಳ್ಳುರು,ಪ್ರವೀಣ ಯು.ಎಲ್,ದೀಪಕ್ ಕುತ್ತಮೊಟ್ಟೆ,ಸತ್ಯಪ್ರಸಾದ್ ಕೆ.ಎಸ್,ಕಮಲಾಕ್ಷ ಪಡ್ಪು,ಎ.ಎಸ್ ಚಂದ್ರಶೇಖರ ಆಚಾರ್ಯ, ಅರ್ಜುನ್,ಜಗದೀಶ,ಕೆ.ಸಿ ಈಶ್ವರ, ಚಿದಾನಂದ ಯು.ಎಸ್,ಬಾಲಚಂದ್ರ ಪಿ.ಎಂ,ಸುಧಾಕರ ಪಿ.ಟಿ,ಶಶಿಕುಮಾರ್ ಉಳುವಾರು,ತೇಜೇಶ್ವರ್ ಕುಂದಲ್ಪಾಡಿ,ಕ್ರಷ್ಣ ಬೆಟ್ಟ,ಸುಷ್ಮಾ ಮೆತ್ತಡ್ಕ,ಹೇಮಾವತಿ ಮೆತ್ತಡ್ಕ ಇತರರು ಉಪಸ್ಥಿತರಿದ್ದರು.ಏ.1ರಂದು ಜಾತ್ರೋತ್ಸವಕ್ಕೆ ಗೊನೆಮೂಹೂರ್ತ ಕಾರ್ಯಕ್ರಮ ನಡೆಯಲಿದ್ದು ಸೀಮೆಯ ಹೆಚ್ಚಿನ ಭಕ್ತರು ಭಾಗವಹಿಸಬೇಕೆಂದು ದೇವಳದ ಜಾತ್ರೋತ್ಸವ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ





































