March 26, 2026

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸಾಕ್ಷ್ಯ ಚಿತ್ರ ಬಿಡುಗಡೆ

ದೃಷ್ಟಿ ಮೀಡಿಯಾ ಸಂಸ್ಥೆಯ ನಿರ್ಮಾಣದಲ್ಲಿ ತಯಾರಿಸಿರುವ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕುರಿತಾದ ಶತಮಾನಗಳ ನಂಬಿಕೆ ಎಂಬ ಸಾಕ್ಷ್ಯಚಿತ್ರದ ಬಿಡುಗಡೆ ಸುಳ್ಯದಲ್ಲಿ ನಡೆಯಿತು.ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್ ಭಾರದ್ವಾಜ್ ಅವರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿ, ತೊಡಿಕಾನ ದೇವಸ್ಥಾನದ ಕುರಿತಾದ ಸಾಕ್ಷ್ಯಚಿತ್ರ ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯವನ್ನು ತೋರಿಸುವ ಜತೆಗೆ ಕ್ಷೇತ್ರದ ಪರಿಚಯ, ವಿಶೇಷತೆಯನ್ನು ನಮಗೆ ತಿಳಿಸಿದೆ. ಇಂತಹ ಸಾಕ್ಷಚಿತ್ರಗಳು ಸುಳ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡುವಂತಾಗಲಿ ಎಂದರು.ಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕಿರಿ ಮಾತನಾಡಿ, […]

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸಾಕ್ಷ್ಯ ಚಿತ್ರ ಬಿಡುಗಡೆ Read More »

ಸುಳ್ಯ : ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ವತಿಯಿಂದ ಮಹಿಳಾ ದಿನಾಚರಣೆ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ತಾಲೂಕು ಇದರ ವತಿಯಿಂದ ಸಿ .ಎ. ಬ್ಯಾಂಕ್ ಸಭಾಭವನದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ) ಅಧ್ಯಕ್ಷರಾದ ಶ್ರೀಮತಿ ಪುಷ್ಪ ಮೇದಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು ಕಾರ್ಯಕ್ರಮವನ್ನು ದಂಪತಿಗಳಾದ ಕಳಪಾರೆ ಪೈಲಾರು ಶ್ರೀಮತಿ ಚೈತ್ರ ಲೋಕೇಶ್‌ ಪೂಜಾರಿ ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಸಾಂದೀಪ ವಿಶೇಷ ಚೇತನ ಶಾಲೆ ಸುಳ್ಯ ಇದರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಿ ಸದಾಶಿವ

ಸುಳ್ಯ : ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ವತಿಯಿಂದ ಮಹಿಳಾ ದಿನಾಚರಣೆ Read More »

ಅಕ್ರಮ ಗೋಸಾಗಾಟ ಮಾಡುತ್ತಿದ್ದ ಮೂವರ ಬಂಧನ

ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ,ಪಿಕಪ್ ವಾಹನ ಸಮೇತ ಜಾನುವಾರುಗಳನ್ನು ಸುಳ್ಯ ಪೊಲೀಸರು ವಶಪಡಿಸಿಕೊಂಡ ಘಟನೆ ವರದಿಯಾಗಿದೆ. ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಸುಳ್ಯ ಪೊಲೀಸರು ಪಿಕಪ್ ವಾಹನವನ್ನು ಹಿಂಬಾಲಿಸಿ ಈ ವೇಳೆ ನಾರ್ಕೊಡು ಮಿತ್ತಡ್ಕ ಎಂಬಲ್ಲಿ ವಾಹನವನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಮೂರು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿದ್ದದ್ದು ಕಂಡು ಬಂದಿದೆ. ಈ ಸಂದರ್ಭದಲ್ಲಿ

ಅಕ್ರಮ ಗೋಸಾಗಾಟ ಮಾಡುತ್ತಿದ್ದ ಮೂವರ ಬಂಧನ Read More »

ನಾಳೆ(ಮಾ.27)ಸಂಪಾಜೆ, ಅರಂತೋಡು, ಸುಳ್ಯದಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 27-03-2026 ನೇ ಶುಕ್ರವಾರ ದ ಕ ಸಂಪಾಜೆ, ಕೊಡಗು ಸಂಪಾಜೆ ಅರಂತೋಡು ಸುಳ್ಯದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ವಿನಂತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ತಿಳಿಸಿದ್ದಾರೆ. ದ. ಕ ಸಂಪಾಜೆಸ್ಥಳ :ಪ್ರಾಥಮಿಕ

ನಾಳೆ(ಮಾ.27)ಸಂಪಾಜೆ, ಅರಂತೋಡು, ಸುಳ್ಯದಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಪಯಸ್ವಿನಿ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲಾ ಮೂವರು ವಿದ್ಯಾರ್ಥಿಗಳು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಇನ್‌ಸ್ಟೈರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಗಿರೀಶ್.ಕೆ,( 9ನೇ). ಈತ ಮಂಡೆಕೋಲು ಗ್ರಾಮದ ಕಾಯರ್ತೋಡಿ ಭಾಸ್ಕರ ಮತ್ತು ಸೌಮ್ಯ ದಂಪತಿಗಳ ಪುತ್ರ. ವಂಶಿತಾ, (8ನೇ) ಈಕೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ವಸಂತ ಮತ್ತು ಭವಾನಿ ದಂಪತಿಗಳ ಪುತ್ರಿ. ಜಸ್ಮಿತಾ ಕೆ.(1೦ನೇ) ಈಕೆ ಜಾಲ್ಸೂರು ಗ್ರಾಮದ ಕದಿಕಡ್ಕ ಬೇಬಿ.ಕೆ ಮತ್ತು ಭವಾನಿ ದಂಪತಿಗಳ ಪುತ್ರಿ.

ಪಯಸ್ವಿನಿ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ Read More »

ಮೊಗರ್ಪಣೆ : ಬೈಕ್ ಅಪಘಾತವಾಗಿ ಸವಾರ ಗಂಭೀರ

ಸುಳ್ಯ: ಮೊಗರ್ಪಣೆ ಸಮೀಪ ಮಾ.25ರಂದು ರಾತ್ರಿ ಕಂಟೈನರ್ ಲಾರಿ ಪಲ್ಟಿಯಾಗಿ ಬಿದ್ದ ಸ್ಥಳದಲ್ಲಿ ರಸ್ತೆಗೆ ಡೀಸೆಲ್ ಚೆಲ್ಲಿರುವ ಪರಿಣಾಮ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಘಟನೆ ವರದಿಯಾಗಿದೆ.ಕಳೆದ ರಾತ್ರಿ ಸುಮಾರು 12.45ರ ವೇಳೆಗೆ ಈ ಘಟನೆ ನಡೆದಿದೆ. ಲಾರಿ ಪಲ್ಟಿಯಾದ ಬಳಿಕ ರಸ್ತೆಯ ಮೇಲೆ ಹರಡಿದ್ದ ಡೀಸೆಲ್ ಗಮನಿಸದೇ ಬಂದ ದ್ವಿಚಕ್ರ ವಾಹನ ಸವಾರನು ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದಾನೆ.ಅಪಘಾತದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿದ್ದು,

ಮೊಗರ್ಪಣೆ : ಬೈಕ್ ಅಪಘಾತವಾಗಿ ಸವಾರ ಗಂಭೀರ Read More »

error: Content is protected !!
Scroll to Top