ಸುಳ್ಯ: ಮೊಗರ್ಪಣೆ ಸಮೀಪ ಮಾ.25ರಂದು ರಾತ್ರಿ ಕಂಟೈನರ್ ಲಾರಿ ಪಲ್ಟಿಯಾಗಿ ಬಿದ್ದ ಸ್ಥಳದಲ್ಲಿ ರಸ್ತೆಗೆ ಡೀಸೆಲ್ ಚೆಲ್ಲಿರುವ ಪರಿಣಾಮ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಘಟನೆ ವರದಿಯಾಗಿದೆ.ಕಳೆದ ರಾತ್ರಿ ಸುಮಾರು 12.45ರ ವೇಳೆಗೆ ಈ ಘಟನೆ ನಡೆದಿದೆ. ಲಾರಿ ಪಲ್ಟಿಯಾದ ಬಳಿಕ ರಸ್ತೆಯ ಮೇಲೆ ಹರಡಿದ್ದ ಡೀಸೆಲ್ ಗಮನಿಸದೇ ಬಂದ ದ್ವಿಚಕ್ರ ವಾಹನ ಸವಾರನು ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದಾನೆ.
ಅಪಘಾತದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ಸಹಾಯದಿಂದ ತಕ್ಷಣವೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೊಗರ್ಪಣೆ : ಬೈಕ್ ಅಪಘಾತವಾಗಿ ಸವಾರ ಗಂಭೀರ














































