March 30, 2026

21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಅನುಮತಿ

ಮಧ್ಯಪ್ರಾಚ್ಯದ ಯುದ್ದದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ 21 ರಾಜ್ಯಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೀಮೆಎಣ್ಣೆ ನೀಡಲು ಕೇಂದ್ರ ಸರ್ಕಾರ ತಾತ್ಕಾಲಿಕ ಅನುಮತಿ ನೀಡಿದೆ. ಪ್ರತಿ ಜಿಲ್ಲೆಯ ತೈಲ ಕಂಪನಿಗಳು 5,000 ಲೀಟರ್ ಸಂಗ್ರಹಿಸಲು ಸೂಚಿಸಲಾಗಿದ್ದು, ಅಡುಗೆ ಮತ್ತು ದೀಪಗಳ ಬಳಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಸೀಮೆಎಣ್ಣೆ ಮುಕ್ತವೆಂದು ಘೋಷಿತವಾದ ಪ್ರದೇಶಗಳಿಗೂ ಇದು ಅನ್ವಯಿಸಲಿದೆ

21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಅನುಮತಿ Read More »

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದೆಯಾ?

ಪತಿಯ ನಿಧನದ ನಂತರ ಅತ್ತೆ-ಮಾವಂದಿರ ಆಸ್ತಿಯಲ್ಲಿ ಸೊಸೆಯ ಹಕ್ಕಿನ ಕುರಿತು ಹಿಂದೂ ಉತ್ತರಾಧಿಕಾರ ಕಾಯ್ದೆ ಸ್ಪಷ್ಟನೆ ನೀಡಿದೆ. ಅತ್ತೆ-ಮಾವ ಸ್ವಯಾರ್ಜಿತವಾಗಿ (ಸ್ವಂತ ದುಡಿಮೆಯಿಂದ) ಗಳಿಸಿದ ಆಸ್ತಿಯಲ್ಲಿ ಸೊಸೆಗೆ ಕಾನೂನುಬದ್ದವಾಗಿ ನೇರ ಹಕ್ಕಿರುವುದಿಲ್ಲ. ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ನೀಡಬಹುದು. ಪತಿಯ ಮರಣದ ನಂತರವೂ ಸೊಸೆಯು ಈ ಆಸ್ತಿಯಲ್ಲಿ ತನಗೆ ಪಾಲಿದೆ ಎಂದು ಕಾನೂನುಬದ್ಧವಾಗಿ ಹಕ್ಕು ಸಾಧಿಸಲು ಬರುವುದಿಲ್ಲ. ಮಾಲೀಕರು ವಿಲ್ (Will) ಮಾಡಿ ಮೃತಪಟ್ಟರೆ ಮಾತ್ರ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗುತ್ತದೆ. ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ನೀಡುವ ಸಂಪೂರ್ಣ

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದೆಯಾ? Read More »

ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ

ಮಾ.29 ರಂದು ಗ್ರಾಮ ಪಂಚಾಯತ್ ಅರಂತೋಡು ಮತ್ತು ದುರ್ಗಾ ಮಾತಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅರಂತೋಡು ಇವುಗಳ ಸಹಯೋಗದಲ್ಲಿ ಪ್ರತಿ ತಿಂಗಳ ಕೊನೆಯ ಭಾನು ವಾರದಂದು ನಡೆಯುತ್ತಿರು ವ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಪೂ 7.30 ಯಿಂದ 9 30ರ ವರೆಗೆ ನಡೆದ ಹೆದ್ದಾರಿ ಸ್ಫಚತೆ ಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರು ಕೇಶವ ಅಡ್ತಲೆ,ಸಿಬ್ಬಂದಿಗಳು. ಸ್ವಚ್ಛತಾ ತಂಡದ ಸಿಬ್ಬಂದಿಗಳು ಹಾಗೂ ಸಂಜೀವಿನಿ ಒಕ್ಕೂಟದವರು ಭಾಗವಹಿಸಿದರು.

ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ Read More »

ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ-ಡಾ.ಅನುರಾಧಾ ಕುರುಂಜಿ:

ಬಂಟ್ವಾಳ:ಸಾಹಿತ್ಯವು ನಿರಂತರ ಸ್ಥಿತ್ಯಂತರಗಳ ಪಯಣವಾಗಿದ್ದು,ಇಲ್ಲಿನ ಸಾಹಿತ್ಯ ಕೇವಲ ಪುಸ್ತಕದಲ್ಲಿ ಉಳಿಯದೆ,ಜನಪದ, ಯಕ್ಷಗಾನದ ಮೂಲಕ ಜನಜೀವನದಲ್ಲಿ ಬೆರೆತು ಹೋಗಿದೆ ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನುರಾಧಾ ಕುರುಂಜಿ ಹೇಳಿದರು. ಬಂಟ್ವಾಳದಲ್ಲಿ ನಡೆದ ದ.ಕ.ಜಿಲ್ಲಾಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ-ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಸಾಹಿತ್ಯದ ಸ್ಥಿತ್ಯಂತರಗಳು ಎಂಬ ವಿಚಾರದ ಕುರಿತು ಮಾತನಾಡಿದರು. ಆಧುನಿಕ ಯುಗದಲ್ಲಿ ನವೋದಯದಿಂದ ಪ್ರಾರಂಭಗೊಂಡು ಸಾಮಾಜಿಕ ಚಿಂತನೆ, ಮಹಿಳಾ ಧ್ವನಿ, ಯುವ ಲೇಖಕರ ಮೂಲಕ ಸಾಹಿತ್ಯ ಹೊಸ ರೂಪಗಳನ್ನು ಪಡೆದುಕೊಂಡಿದೆ. ರತ್ನಾಕರ ವರ್ಣಿಯಾದಿಯಾಗಿ ಮುದ್ದಣ, ಗೋವಿಂದ

ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ-ಡಾ.ಅನುರಾಧಾ ಕುರುಂಜಿ: Read More »

ಕಲ್ಯಾಣ ಮಂಟಪದಲ್ಲಿ ವಧು-ವರರ ಸಂಬಂಧಿಕರ ನಡುವೆ ಹೊಡೆದಾಟ

ಹಾಸನದ ಅರಳೆಪೇಟೆಯ ಎಂಹೆಚ್ ಕನ್ವೆನ್ನನ್‌ಹಾಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಮಂಟಪದಲ್ಲಿ ಮಾರಾಮಾರಿ ನಡೆದಿದೆ. ಮಾರ್ಚ್ 29 ರಂದು ನಡೆದ ಈ ಘಟನೆಯಲ್ಲಿ ರಸ್ತೆ ಮಧ್ಯದಲ್ಲೇ ವಧು ಮತ್ತು ವರನ ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಿರಿಯರ ಮಧ್ಯಪ್ರವೇಶದಿಂದ ಗಲಾಟೆ ತಣ್ಣಗಾಗಿದ್ದು, ಮಾರಾಮಾರಿಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಯಾಣ ಮಂಟಪದಲ್ಲಿ ವಧು-ವರರ ಸಂಬಂಧಿಕರ ನಡುವೆ ಹೊಡೆದಾಟ Read More »

ಮದುವೆಗೆ ಸಿಗಲಿದೆ ರೂ.60,000 ಸಹಾಯಧನ!

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ₹60,000 ಆರ್ಥಿಕ ನೆರವು ನೀಡುತ್ತಿದೆ.ಕನಿಷ್ಠ ಒಂದು ವರ್ಷ ಹಳೆಯದಾದ ಚಾಲ್ತಿಯಲ್ಲಿರುವ ಲೇಬ‌ರ್ ಕಾರ್ಡ್ ಹೊಂದಿರುವವರು ಈ ಸೌಲಭ್ಯಕ್ಕೆ ಅರ್ಹರು. ವಧುವಿಗೆ 18 ಹಾಗೂ ವರನಿಗೆ 21 ವರ್ಷ ತುಂಬಿರಬೇಕು. ಒಂದು ಕುಟುಂಬದ ಇಬ್ಬರು ಮಕ್ಕಳಿಗೆ ಮಾತ್ರ ಈ ಧನಸಹಾಯ ಸಿಗಲಿದ್ದು, ಸೇವಾ ಸಿಂಧು ಕೇಂದ್ರ ಅಥವಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಮದುವೆಗೆ ಸಿಗಲಿದೆ ರೂ.60,000 ಸಹಾಯಧನ! Read More »

ಐಪಿಎಲ್ : ಕೆ.ಕೆ.ಆರ್ ವಿರುದ್ಧ ಗೆದ್ದು ಬೀಗಿದ ಮುಂಬೈ!

ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆ‌ರ್, ಅಜಿಂಕ್ಯ ರಹಾನೆ (67) ಮತ್ತು ರಘುವಂಶಿ (51) ಅವರ ಅರ್ಧಶತಕಗಳ ನೆರವಿನಿಂದ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈಗೆ ರೋಹಿತ್ ಶರ್ಮಾ (78 ರನ್, 38 ಎಸೆತ) ಮತ್ತು ರಯಾನ್ ರಿಕೆಲ್ಟನ್ (81 ರನ್, 43 ಎಸೆತ) ಮೊದಲ ವಿಕೆಟ್‌ಗೆ 148 ರನ್‌ಗಳ ಸ್ಫೋಟಕ ಜೊತೆಯಾಟ ನೀಡಿದ್ದರು. 19.1 ಓವರ್‌ಗಳಲ್ಲಿ ಮುಂಬೈ 4 ವಿಕೆಟ್ ಕಳೆದುಕೊಂಡು

ಐಪಿಎಲ್ : ಕೆ.ಕೆ.ಆರ್ ವಿರುದ್ಧ ಗೆದ್ದು ಬೀಗಿದ ಮುಂಬೈ! Read More »

error: Content is protected !!
Scroll to Top