ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ-ಡಾ.ಅನುರಾಧಾ ಕುರುಂಜಿ:

ಬಂಟ್ವಾಳ:ಸಾಹಿತ್ಯವು ನಿರಂತರ ಸ್ಥಿತ್ಯಂತರಗಳ ಪಯಣವಾಗಿದ್ದು,ಇಲ್ಲಿನ ಸಾಹಿತ್ಯ ಕೇವಲ ಪುಸ್ತಕದಲ್ಲಿ ಉಳಿಯದೆ,ಜನಪದ, ಯಕ್ಷಗಾನದ ಮೂಲಕ ಜನಜೀವನದಲ್ಲಿ ಬೆರೆತು ಹೋಗಿದೆ ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನುರಾಧಾ ಕುರುಂಜಿ ಹೇಳಿದರು. ಬಂಟ್ವಾಳದಲ್ಲಿ ನಡೆದ ದ.ಕ.ಜಿಲ್ಲಾ
ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ-ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಸಾಹಿತ್ಯದ ಸ್ಥಿತ್ಯಂತರಗಳು ಎಂಬ ವಿಚಾರದ ಕುರಿತು ಮಾತನಾಡಿದರು. ಆಧುನಿಕ ಯುಗದಲ್ಲಿ ನವೋದಯದಿಂದ ಪ್ರಾರಂಭಗೊಂಡು ಸಾಮಾಜಿಕ ಚಿಂತನೆ, ಮಹಿಳಾ ಧ್ವನಿ, ಯುವ ಲೇಖಕರ ಮೂಲಕ ಸಾಹಿತ್ಯ ಹೊಸ ರೂಪಗಳನ್ನು ಪಡೆದುಕೊಂಡಿದೆ. ರತ್ನಾಕರ ವರ್ಣಿಯಾದಿಯಾಗಿ ಮುದ್ದಣ, ಗೋವಿಂದ ಪೈ, ಪಂಜೆ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಕಡೆಂಗೊಡ್ಲು, ಕೊಳಂಬೆ ಪುಟ್ಟಣ್ಣ ಗೌಡ ಮೊದಲಾದ ಅವಿಭಜಿತ ದಕ್ಷಿಣ ಕನ್ನಡದ ಸಾಹಿತ್ಯ ದಿಗ್ಗಜರು ಸಾಹಿತ್ಯದಲ್ಲಿ ಸಂಚಲನವನ್ನೇ ಮೂಡಿಸಿದ್ದಾರೆ. ಪ್ರಾಚೀನ ಸಾಹಿತ್ಯಕ್ಕಿಂತಲೂ ಮೊದಲೇ
ಪಾಡ್ದನ, ನೇಜಿ ಹಾಡು, ಶೋಭಾನೆ, ಅಜ್ಜಿಕಥೆಗಳು ಜಾನಪದ ಕ್ಷೇತ್ರದಲ್ಲಿ ಕಾಣಿಸಿಕೊಂಡಿವೆ.ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಹತ್ವಪೂರ್ಣ ಸಾಹಿತ್ಯ ಕಾರ್ಯ ನಡೆಯಬೇಕಾದರೆ ಮಕ್ಕಳಲ್ಲಿ ನಾವು ಓದಿನ ಹವ್ಯಾಸ ಬೆಳೆಸಬೇಕಿದೆ ಎಂದರು.
ಸಂಸ್ಕೃತಿಯ ಪಲ್ಲಟಗಳು ಎಂಬ ವಿಷಯದಲ್ಲಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗುಳಿ ವಿಚಾರ ಮಂಡಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಚಿದಂಬರ ಬೈಕಂಪಾಡಿ, ದ.ಕ.ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಬೆಳ್ತಂಗಡಿ ತಾಲೂಕು ಕಸಾಪ ಅಧ್ಯಕ್ಷ ಡಿ.ಯದುಪತಿ ಗೌಡ ವೇದಿಕೆಯಲ್ಲಿದ್ದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.





















































































Leave a Comment

Your email address will not be published. Required fields are marked *

error: Content is protected !!
Scroll to Top