ಪತಿಯ ನಿಧನದ ನಂತರ ಅತ್ತೆ-ಮಾವಂದಿರ ಆಸ್ತಿಯಲ್ಲಿ ಸೊಸೆಯ ಹಕ್ಕಿನ ಕುರಿತು ಹಿಂದೂ ಉತ್ತರಾಧಿಕಾರ ಕಾಯ್ದೆ ಸ್ಪಷ್ಟನೆ ನೀಡಿದೆ. ಅತ್ತೆ-ಮಾವ ಸ್ವಯಾರ್ಜಿತವಾಗಿ (ಸ್ವಂತ ದುಡಿಮೆಯಿಂದ) ಗಳಿಸಿದ ಆಸ್ತಿಯಲ್ಲಿ ಸೊಸೆಗೆ ಕಾನೂನುಬದ್ದವಾಗಿ ನೇರ ಹಕ್ಕಿರುವುದಿಲ್ಲ. ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ನೀಡಬಹುದು. ಪತಿಯ ಮರಣದ ನಂತರವೂ ಸೊಸೆಯು ಈ ಆಸ್ತಿಯಲ್ಲಿ ತನಗೆ ಪಾಲಿದೆ ಎಂದು ಕಾನೂನುಬದ್ಧವಾಗಿ ಹಕ್ಕು ಸಾಧಿಸಲು ಬರುವುದಿಲ್ಲ. ಮಾಲೀಕರು ವಿಲ್ (Will) ಮಾಡಿ ಮೃತಪಟ್ಟರೆ ಮಾತ್ರ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗುತ್ತದೆ. ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ನೀಡುವ ಸಂಪೂರ್ಣ ಅಧಿಕಾರ ಮಾಲೀಕರಿಗಿರುತ್ತದೆ













































