March 2026

ಅರೆಭಾಷೆ ರಾಜ ಭಾಷೆಯಾಗಿ ಮೆರೆಯುತ್ತಿದ್ದು ,ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ : ಸುಶ್ಮಿತಾ ಆದಿತ್ಯ ಚಿದ್ಗಲು

ಐನೂರು ವರ್ಷಗಳ ಇತಿಹಾಸದ ಹಿನ್ನೆಲೆ ನಮ್ಮ ಅರೆಭಾಷೆಗಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಿರುವ ಈ ಭಾಷೆ ದಕ್ಷಿಣ ಕನ್ನಡ ಕೆಲವು ಭಾಗ ಮತ್ತು ಕೊಡಗಿನ ಕೆಲವು ಪ್ರದೇಶಗಳಲ್ಲಿ ರಾಜ ಭಾಷೆಯಾಗಿ ಮೆರೆಯುತ್ತಿದೆ. ಇದನ್ನು ಉಳಿಸಿ ಬೆಳೆಸುವ ಮೂಲಕ ಅರೆಭಾಷೆ ಜನಾಂಗವನ್ನು ಬೆಳೆಸಿದಂತೆ ಎಂದೂ ಬೆಳ್ತಂಗಡಿ ಪ್ರಸನ್ನ ಕಾಲೇಜು ಉಪನ್ಯಾಸಕಿ ಸುಶ್ಮಿತಾ ಆದಿತ್ಯ ಚಿದ್ಗಲು ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಮಡಪ್ಪಾಡಿ ಗ್ರಾಮ ಗೌಡ ಸಮಿತಿ ಹಾಗೂ ಮಹಿಳಾ ಘಟಕಗಳ ಆಶ್ರಯದಲ್ಲಿ ಮಾರ್ಚ್ 08 […]

ಅರೆಭಾಷೆ ರಾಜ ಭಾಷೆಯಾಗಿ ಮೆರೆಯುತ್ತಿದ್ದು ,ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ : ಸುಶ್ಮಿತಾ ಆದಿತ್ಯ ಚಿದ್ಗಲು Read More »

ತನ್ನ ಹುಟ್ಟೂರಿನಲ್ಲಿ ಸಂಘಟಕ ದಿನೇಶ್ ಮಡಪ್ಪಾಡಿಯವರಿಗೆ ಸನ್ಮಾನ

ಮಾರ್ಚ್ 8 ರಂದು ಕರ್ನಾಟಕ ಸರ್ಕಾರ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ. ಗ್ರಾಮ ಗೌಡ ಸಮಿತಿ ಮತ್ತು ಗ್ರಾಮ ಗೌಡ ಮಹಿಳಾ ಘಟಕ ಮಡಪ್ಪಾಡಿ ಇವರ ಆಶ್ರಯದಲ್ಲಿ ಮಡಪ್ಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೊಳ್ಳಾಡಿ ತಮ್ಮಯ್ಯ ಗೌಡ ರಂಗಮಂದಿರದಲ್ಲಿ ನಡೆದ “ಅರೆಬಾಸೆ ಗ್ರಾಮೋತ್ಸವ – 2026” ರ ಅದ್ದೂರಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಂಘಟಕ, ಮಾರ್ಗದರ್ಶಕ ನ್ಯಾಯವಾದಿ ದಿನೇಶ್ ಮಡಪ್ಪಾಡಿಯವರನ್ನು ಸನ್ಮಾನಿಸಲಾಯಿತು.ಸಕ್ರಿಯ ಸಾಮಾಜಿಕ ಕಾರ್ಯಕರ್ತನಾಗಿ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ

ತನ್ನ ಹುಟ್ಟೂರಿನಲ್ಲಿ ಸಂಘಟಕ ದಿನೇಶ್ ಮಡಪ್ಪಾಡಿಯವರಿಗೆ ಸನ್ಮಾನ Read More »

ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳಿಗೆ ತರಬೇತಿ

ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳಿಗೆ ನೀಡುವ ತರಬೇತಿಯ ಅಂಗವಾಗಿ ತಂಡವು ಸುಳ್ಯದ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಜೇನು ಸಂಸ್ಕರಣಾ ಘಟಕಕ್ಕೆ ಮಾ. 12 ರಂದು ಭೇಟಿ ನೀಡಿದರು.ನಬಾರ್ಡ್‌ನ ತರಬೇತಿ ಸಂಸ್ಥೆಯಾದ ಬಿಐಆರ್‌ಡಿ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ‘ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹಸಿರು ಹಣಕಾಸು’ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು,ಈ ತರಬೇತಿ ಕಾರ್ಯಕ್ರಮವು ಕೃಷಿ ಕ್ಷೇತ್ರದಲ್ಲಿ

ರೈತ ಉತ್ಪಾದಕ ಸಂಘಟನೆಗಳ ಪ್ರತಿನಿಧಿಗಳಿಗೆ ತರಬೇತಿ Read More »

ಗುಂಡ್ಯ : ಕಾರು ಕೆಎಸ್ಸಾರ್ಟಿಸಿ ಬಸ್ಸು ಅಪಘಾತ,ಮೂವರು ಸಾವು

ಕೆಎಸ್ಸಾರ್ಟಿಸಿ ಬಸ್ಸು ಮತ್ತು ಕಾರಿನ ನಡುವೆ ಮಾ.13ರಂದು ಕಡಬ ತಾಲೂಕಿನ ಗುಂಡ್ಯ ಸಮೀಪ ಅಪಘಾತ ಸಂಭವಿಸಿ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಗುಂಡ್ಯ ಗಡಿ ದೇವಸ್ಥಾನದ ಸಮೀಪ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.ಕಾರಿನಲ್ಲಿದ್ದವರು ಬೆಳ್ತಂಗಡಿ ಕೊಕ್ಕಡ ನಿವಾಸಿಗಳು ಎಂದು ತಿಳಿದು ಬಂದಿದೆ.

ಗುಂಡ್ಯ : ಕಾರು ಕೆಎಸ್ಸಾರ್ಟಿಸಿ ಬಸ್ಸು ಅಪಘಾತ,ಮೂವರು ಸಾವು Read More »

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು? !!!

ರಾಜ್ಯದಲ್ಲಿ 2026ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ.ಈ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ನೀಡಬೇಕು ಅನ್ನುವ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ.ಈ. ಪ್ರಶ್ನೆಗೆ ವಿದ್ಯಾರ್ಥಿಗಳು ಗಮನಿಸ ಬೇಕಾದ  ಅಂಶಗಳು ಅಂದರೆ- ಸಾಮಾನ್ಯವಾಗಿ ಹತ್ತು ವರ್ಷಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕೆ ಹಾಗೂ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಅಗತ್ಯವಾದ ಪ್ರಮುಖ ಹಂತವೇ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ. ಆದ್ದರಿಂದ ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ.ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಶಾಲಾ ಶಿಕ್ಷಣದ ಅಂತಿಮ

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು? !!! Read More »

ಗ್ಯಾಸ್‌ ಸಿಲಿಂಡ‌ರ್ ಡೆಲಿವರಿ ವಿಳಂಬವಾಗ್ತಿದೆಯೇ? ತಕ್ಷಣ ಇಲ್ಲಿ ದೂರು ನೀಡಿ

ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ, ಎಲ್‌ಪಿಜಿ ಸಿಲಿಂಡ‌ರ್ ಬುಕ್ ಮಾಡಿದ 48 ರಿಂದ 60 ಗಂಟೆಗಳ ಒಳಗೆ (ಸುಮಾರು ಎರಡೂವರೆ ದಿನ) ಗ್ರಾಹಕರಿಗೆ ತಲುಪಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಡೆಲಿವರಿ ವಿಳಂಬವಾದರೆ ಗ್ರಾಹಕರು ಆಯಾ ಕಂಪನಿಗಳ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ತೈಲ ಕಂಪನಿಗಳು (Indane): 1800-2333-555 $ 7718955555. (Bharat Gas): 1800-22-4344 9 7715012345. 2(HP Gas): 1800-2333-555 5 9493602222.

ಗ್ಯಾಸ್‌ ಸಿಲಿಂಡ‌ರ್ ಡೆಲಿವರಿ ವಿಳಂಬವಾಗ್ತಿದೆಯೇ? ತಕ್ಷಣ ಇಲ್ಲಿ ದೂರು ನೀಡಿ Read More »

ಸುಳ್ಯ : ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷರಾದ ಸರಸ್ವತಿಯವರಿಗೆ ವರ್ಗಾವಣೆ

ಸುಳ್ಯ ಪೊಲೀಸ್‌ ಠಾಣೆಯ ತನಿಖಾ ವಿಭಾಗದ ಉಪ ನಿರೀಕ್ಷಕರಾದ ಸರಸ್ವತಿ ಬಿ.ಟಿ. ಅವರಿಗೆ ವರ್ಗಾವಣೆಯಾಗಿದೆ. ಬೆಂಗಳೂರಿನ ಅರಣ್ಯ ಸಂಚಾರಿ ಘಟಕಕ್ಕೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ಪ್ರೊಬೇಷನರಿ ಅವಧಿ ಸೇರಿದಂತೆ ಸುಮಾರು ನಾಲ್ಕು ವರ್ಷಗಳ ಕಾಲ ಅವರು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅವರು ಸೇವೆ ಸಲ್ಲಿಸಿದ್ದರು.

ಸುಳ್ಯ : ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷರಾದ ಸರಸ್ವತಿಯವರಿಗೆ ವರ್ಗಾವಣೆ Read More »

ಸುಳ್ಯ : ಕುಸಿದು ಬಿದ್ದು ಉಪನ್ಯಾಸಕ ಸಾವು

ಸುಳ್ಯ:ಸುಳ್ಯ ತಾಲೂಕಿನ ಕೊಡಿಯಾಲಬೈಲ್ ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಾ.12ರಂದು ನಡೆದಿದೆ. ಮೃತರನ್ನು ಮಂಜು(42) ಎಂದು ತಿಳಿದು ಬಂದಿದೆ. ಕನ್ನಡ ಅವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಾಲೇಜಿನಲ್ಲಿ ನನಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿಕೊಂಡು ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು. ಅಲ್ಲಿಂದ ಬಳಿಕ ಅವರು ಔಷಧಿಗಾಗಿ ಸುಳ್ಯದ ಶ್ರೀ ರಾಮಪೇಟೆಯಲ್ಲಿರುವ ಮೆಡಿಕಲ್ ಶಾಪ್ ಒಂದಕ್ಕೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಶ್ರೀರಾಂ ಪೇಟೆಯ ಬಳಿ ಕುಸಿದು ಬಿದ್ದಿದ್ದಾರೆ.

ಸುಳ್ಯ : ಕುಸಿದು ಬಿದ್ದು ಉಪನ್ಯಾಸಕ ಸಾವು Read More »

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ಎಚ್ಚರ ಅಗತ್ಯ!

ಭಾರತೀಯ ಸಂಪ್ರದಾಯದಂತೆ ಮಕ್ಕಳ ಅಂದ ಹೆಚ್ಚಿಸಲು ಮತ್ತು ದೃಷ್ಟಿ ತಗಲಬಾರದೆಂದು ಕಣ್ಣಿಗೆ ಕಾಡಿಗೆ ಹಚ್ಚುವುದು ಸಾಮಾನ್ಯ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಕಾಡಿಗೆಗಳಲ್ಲಿ ಸೀಸ, ಕಾರ್ಬನ್ ಮತ್ತು ವಿಷಕಾರಿ ರಾಸಾಯನಿಕಗಳಿದ್ದು, ಇದು ಮಕ್ಕಳ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ವೈದ್ಯಕೀಯ ವಿಜ್ಞಾನ ತಿಳಿಸಿದೆ. ಈ ಕಾಡಿಗೆಯ ಕಣಗಳು ಕಣ್ಣೀರಿನ ನಾಳಗಳನ್ನು ಮುಚ್ಚಿ, ಕಣ್ಣು ಸೋಂಕು, ಊತ, ರೆಪ್ಪೆಗಳ ಮೇಲೆ ಗುಳ್ಳೆಗಳು ಮತ್ತು ದೀರ್ಘಕಾಲದಲ್ಲಿ ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ಆದ್ದರಿಂದ, ಕಾಡಿಗೆ ಬಳಸುವ ಮುನ್ನ ಎಚ್‌ಚರಿಕೆ ವಹಿಸುವುದು ಅತ್ಯಗತ್ಯ.

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ಎಚ್ಚರ ಅಗತ್ಯ! Read More »

ಮಾ.13 ಅರಂತೋಡಿನಲ್ಲಿ ತೆಕ್ಕಿಲ್ ಸೌಹಾರ್ಧ ಇಪ್ತಾರ್ ಕೂಟ

ಅರಂತೋಡು: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ 21 ನೇ ವರ್ಷದ ಬೃಹತ್ ಸೌಹಾರ್ದ ಇಫ್ತಾರ್ ಕೂಟವು ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ಮಾರ್ಚ್ 13 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಗಮದಲ್ಲಿ ಗೂನಡ್ಕ-ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿ ಖತೀಬರಾದ ನಯೀಮ್ ಫೈಝಿ ಅಲ್ ಮಹಬರಿ, ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಚೈತನ್ಯ ಸೇವಾಶ್ರಮ ಅಜ್ಜಾವರ, ಗುತ್ತಿಗಾರು ಚರ್ಚ್ ನ ಧರ್ಮ ಗುರುಗಳಾದ ರೆ| ಪ| ಆದರ್ಶ್ ಜೋಸೆಫ್ ಇವರು

ಮಾ.13 ಅರಂತೋಡಿನಲ್ಲಿ ತೆಕ್ಕಿಲ್ ಸೌಹಾರ್ಧ ಇಪ್ತಾರ್ ಕೂಟ Read More »

error: Content is protected !!
Scroll to Top