ಮದುವೆಗೆ ಸಿಗಲಿದೆ ರೂ.60,000 ಸಹಾಯಧನ!
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ₹60,000 ಆರ್ಥಿಕ ನೆರವು ನೀಡುತ್ತಿದೆ.ಕನಿಷ್ಠ ಒಂದು ವರ್ಷ ಹಳೆಯದಾದ ಚಾಲ್ತಿಯಲ್ಲಿರುವ ಲೇಬರ್ ಕಾರ್ಡ್ ಹೊಂದಿರುವವರು ಈ ಸೌಲಭ್ಯಕ್ಕೆ ಅರ್ಹರು. ವಧುವಿಗೆ 18 ಹಾಗೂ ವರನಿಗೆ 21 ವರ್ಷ ತುಂಬಿರಬೇಕು. ಒಂದು ಕುಟುಂಬದ ಇಬ್ಬರು ಮಕ್ಕಳಿಗೆ ಮಾತ್ರ ಈ ಧನಸಹಾಯ ಸಿಗಲಿದ್ದು, ಸೇವಾ ಸಿಂಧು ಕೇಂದ್ರ ಅಥವಾ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಮದುವೆಗೆ ಸಿಗಲಿದೆ ರೂ.60,000 ಸಹಾಯಧನ! Read More »









