ಸುಳ್ಯ ತಾಲೂಕಿನ ಕೆಲವೆಡೆ ಮಾ.,28ರಂದು ಭಾರೀ ಗಾಳಿ ಮಳೆ ಸುರಿದ್ದು ಅಪಾರ ಹಾನಿ ಸಂಭವಿಸಿ ಸಂಚಾರಕ್ಕೆ ತಡೆ ಉಂಟಾದ ಘಟನೆ ವರದಿಯಾಗಿದೆ.
ಅರಂತೋಡು ತೊಡಿಕಾನ ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ತಡೆಯುಂಟಾಗಿದೆ.ಅರಂತೋಡು ಪೇಟೆಯಲ್ಲಿ ತೆಂಗಿನ ಮರವೊಂದು ವಿದ್ಯುತ್ ಲೈನ್ ಗೆ ಹಾಗೂ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಧ್ವಾರಕ್ಕೆ ಹಾನಿ ಉಂಟಾಗಿದೆ.ಅರಂತೋಡು ಉಳುವಾರು ಎಲ್ಪುಕಜೆ ಪ್ರವೀಣ ಯು. ಎಲ್. ಇವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.ದೊಡ್ಡೇರಿಲ್ಲಿ ವಿದ್ಯುತ್ ಕಂಬವೊಂದು ರಸ್ತೆಗೆ ಉರುಳಿ ಬಿದ್ದಿವೆ.ಜಟ್ಟಿಪಳ್ಲದಲ್ಲಿ ಮನೆಯೊಂದರ ಆವರಣಗೋಡೆಗೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ.ಬೊಳುಬೈಲಿನಲ್ಲಿ ಗ್ಯಾರೇಜ್ ಒಂದರ ಮೇಲ್ವಾವಣಿಯ ಶೀಟ್ ಹಾರಿ ಹೋಗಿದೆ.ವಿದ್ಯುತ್ ಕೈ ಕೊಟ್ಟಿದ್ದು ಸುಳ್ಯ ತಾಲೂಕು ಕತ್ತಲೆಯಲ್ಲಿದೆ.
ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ಅಪಾರ ಹಾನಿ














































