March 2026

ಕೇನ್ಯ : ಕೆ.ಪಿ.ಎಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಫ್ರೆಂಡ್ಸ್ ಕ್ಲಬ್ ಕೇನ್ಯ ಇದರ ಆಶ್ರಯದಲ್ಲಿ 6 ತಂಡಗಳ 12 ಜನರ ಲೀಗ್ ಮಾದರಿಯ ಕ್ರಿಕೆಟ್‌ ಪಂದ್ಯಾಟ ಕೆ.ಪಿ.ಎಲ್ ಟ್ರೋಫಿ 2026 ಮಾ. 22 ರಂದು ಕೇನ್ಯ ವಿಷ್ಣು ನಗರದ ಮೈದಾನದಲ್ಲಿ ನಡೆಯಿತು.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಕೇನ್ಯ ಉದ್ಘಾಟಿಸಿದರು.ಪಂಜ ಶ್ರೀ ಪರಿವಾರ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕ್ಲಬ್ ನ ಹಿರಿಯ […]

ಕೇನ್ಯ : ಕೆ.ಪಿ.ಎಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ Read More »

ಕಾರು ಮತ್ತು ಕಂಟೇನರ್ ಲಾರಿ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕ ಸಾವು

ಜಾಲ್ಸೂರು ಗ್ರಾಮದ ಮಾಣಿ ಮೈಸೂರು ರಸ್ತೆಯ ಬೊಳುಬೈಲು ಬಳಿ ಕಾರು ಮತ್ತು ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ , ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಸಾವನ್ನಪ್ಪಿದ ವ್ಯಕ್ತಿಯನ್ನು ಕಿನ್ನಿಂಗಾರ್ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಾರು ಮತ್ತು ಕಂಟೇನರ್ ಲಾರಿ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕ ಸಾವು Read More »

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೆಸ್ಕಾಂ ಗುತ್ತಿಗೆ ಸಿಬ್ಬಂದಿ ಸಾವು

ಸುಳ್ಯ ತಾಲೂಕಿನ ನಿಂತಿಕಲ್ಲು‌ ಬಳಿ ವಿದ್ಯುತ್ ಕಂಬಕ್ಕೆ ಬೈಕ್‌ ಡಿಕ್ಕಿಯಾಗಿ ಮೆಸ್ಕಾಂ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಬೈಕ್ ಸವಾರ ಲೋಕನಾಥ (35) ಎಂಬವರು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.ಸುಳ್ಯದಿಂದ ಮನೆಗೆ ತೆರಳುತ್ತಿದ್ದಾಗ ಈ‌ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತು . ಅಲ್ಲಿ ಅವರಿಗೆ ಚಿಕಿತ್ಸೆ ಫಲಿಸದೇ ಮೃತಪಟ್ಟರೆನ್ನಲಾಗಿದೆ.ಸುಳ್ಯ ಮೆಸ್ಕಾಂ ನಲ್ಲಿ ಗುತ್ತಿಗೆ ಆಧಾರದಲ್ಲಿ ಮೀಟರ್ ರೀಡಿಂಗ್ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೆಸ್ಕಾಂ ಗುತ್ತಿಗೆ ಸಿಬ್ಬಂದಿ ಸಾವು Read More »

ಅಜ್ಜಾವರ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಮತ್ತು ಸಾಬೂನು ತಯಾರಿಕಾ ಕಾರ್ಯಗಾರ

ಅಜ್ಜಾವರ : ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ ಶ್ರೀ ರಕ್ಷಾ ಸಂಜೀವಿನಿ ಒಕ್ಕೂಟ (ರಿ.)ಅಜ್ಜಾವರ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.24ರಂದು ಅಜ್ಜಾವರದಲ್ಲಿ “ಮಹಿಳಾ ಜಾಗೃತಿ ಮತ್ತು ಸಾಬೂನು ತಯಾರಿಕಾ ಕಾರ್ಯಗಾರ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು NRLM ತಾಲೂಕು ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ಅವರು ನೆರವೇರಿಸಿದರು ,ಹಾಗೆಯೇ ಮಹಿಳಾ ಹಕ್ಕುಗಳ ಕುರಿತು ಮಾಹಿತಿಯನ್ನು

ಅಜ್ಜಾವರ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಮತ್ತು ಸಾಬೂನು ತಯಾರಿಕಾ ಕಾರ್ಯಗಾರ Read More »

ಮಾಲೀಕರನ್ನು ಹುಡುಕುತ್ತಾ 17 ಕಿ.ಮೀ ನಡೆದ ನಾಯಿಗಳು: ವಿಡಿಯೋ ವೈರಲ್

ಚೀನಾದಲ್ಲಿ ಏಳು ನಾಯಿಗಳು ತಮ್ಮ ಮಾಲೀಕರನ್ನು ಹುಡುಕಿಕೊಂಡು 17 ಕಿಲೋಮೀಟರ್ ದೂರ ನಡೆದಿರುವ ಘಟನೆ ವರದಿಯಾಗಿದೆ. ಕೆಲವು ದುರುಳರು ನಾಯಿಗಳನ್ನು ಕದ್ದು, ಮಾಂಸದ ಅಂಗಡಿಗೆ ಮಾರಾಟ ಮಾಡಲು ಟ್ರಕ್‌ನಲ್ಲಿ ಸಾಗಿಸುತ್ತಿದ್ದಾಗ, ನಾಯಿಗಳು ಟ್ರಕ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿವೆ. ಎರಡು ದಿನಗಳ ಕಾಲ 17ಕಿ.ಮೀ.ಗೂ ಹೆಚ್ಚು ನಡೆದ ಈ ನಾಯಿಗಳು ಮಾರ್ಚ್ 19 ರಂದು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಿವೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಮಾಲೀಕರನ್ನು ಹುಡುಕುತ್ತಾ 17 ಕಿ.ಮೀ ನಡೆದ ನಾಯಿಗಳು: ವಿಡಿಯೋ ವೈರಲ್ Read More »

ಮೀಸಲು ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಅಸಾಧ್ಯ : ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಮೀಸಲು ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.ಪ್ರಶ್ನೋತ್ತರ ಕಲಾಪದಲ್ಲಿ ಕಿಶೋರ್ ಕುಮಾರ್ ಪುತ್ತೂರು ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಅಕ್ರಮ ಸಕ್ರಮದಡಿ ನಮೂನೆ 50, 53, 57ರಲ್ಲಿ ಜಮೀನು ಮಂಜೂರಾತಿ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ ಕಂದಾಯ ಭೂಮಿ ಮಂಜೂರು ಮಾಡಲು ಬರುತ್ತದೆಯೇ ಹೊರತು ಅರಣ್ಯ ಭೂಮಿಯನ್ನು ಅಲ್ಲ ಎಂದರು.ಒಂದೇ ಸರ್ವೇ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ

ಮೀಸಲು ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಅಸಾಧ್ಯ : ಸಚಿವ ಈಶ್ವರ ಖಂಡ್ರೆ Read More »

ದೀಕ್ಷಿತ್ ಮಡ್ತಿಲರಿಂದ ಬೆಳ್ಳಾರೆ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

ಬೆಳ್ಳಾರೆ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಐವರ್ನಾಡು ಮಂಜುನಾಥ್ ಮಡ್ತಿಲ ಇವರ ಪುತ್ರ ದೀಕ್ಷಿತ್ ಮಡ್ತಿಲ ಇವರು ಸಾಹಿತಿ ಬರಹಗಾರ ತೇಜಕುಮಾರ್ ಬಡ್ಡಡ್ಕ ಇವರ ಜನಪ್ರಿಯ ಕೃತಿ ಮಜಲಿನಾಚೆ – ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಇವರೊಂದಿಗೆ ಇವರ ಸಹಪಾಠಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಂಥಾಪಾಲಕಿ ಶ್ರೀಮತಿ ಶಶಿಕಲಾ O ಪುಸ್ತಕ ಸ್ವೀಕರಿಸಿದರು.

ದೀಕ್ಷಿತ್ ಮಡ್ತಿಲರಿಂದ ಬೆಳ್ಳಾರೆ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ Read More »

ಅಡ್ತಲೆ : ತೊಡಿಕಾನ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಾತ್ರೋತ್ಸವವು ಏ.13ರಿಂದ ನಡೆಯಲಿದ್ದು, ಆ ಪ್ರಯುಕ್ತ ಅರಂತೋಡು ಗ್ರಾಮದ ಅಡ್ತಲೆ ಬೆದ್ರುಪಣೆಯ ಉಳ್ಳಾಕ್ಲು ದೈವಸ್ಥಾನ ವಠಾರದಲ್ಲಿ ನಡೆಯಿತು. ಹಸಿರುವಾಣಿ ಸಂಗ್ರಹ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯವರು ಊರಿನವರು ಉಪಸ್ಥಿತರಿದ್ದರು.

ಅಡ್ತಲೆ : ತೊಡಿಕಾನ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಆಲೆಟ್ಟಿ ಗ್ರಾಮದ ಕೋಲ್ಟಾರು ಎಂಬಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಮಾ.23ರಂದು ನಡೆದಿದೆ.ಮೃತ ವ್ಯಕ್ತಿಯನ್ನು ಬಂದಡ್ಕ ಮಾಣಿಮೂಲೆ ಪಾಲಾರು ನಿವಾಸಿ ಶ್ರೀಧರ ಎಂದು ಗುರುತಿಸಲಾಗಿದೆ. ಅವರು ಅರಂಬೂರಿನ ಮರದ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದು, ದಿನಪ್ರತಿ ಮನೆಗೆ ಹೋಗಿ ಬರುತ್ತಿದ್ದರು.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು Read More »

ಮಂಡೆಕೋಲು : ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವವು ಏ.13ರಿಂದ ಏ. 20ರ ತನ‌ನಡೆಯಲಿದ್ದು, ಆ ಪ್ರಯುಕ್ತ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿತು.ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.ಹಸಿರುವಾಣಿ ಸಂಗ್ರಹ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ,ಆರ್ಥಿಕ ಸಮಿತಿ ಸಂಚಾಲಕ ಕಿಶೋರ್ ಯು.ಎಂ,ಸ್ಥಳೀಯರಾದ ಶಿವಪ್ರಸಾದ್ ಉಗ್ರಾಣಿ ಮನೆ ,ಕೇಶವ ಮೂರ್ತಿ ಹೆಬ್ಬಾರ್, ಅನಂತಕೃಷ್ಣ ಚಾಕೋಟೆಡಿಸಿ

ಮಂಡೆಕೋಲು : ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

error: Content is protected !!
Scroll to Top