May 1, 2026

ನಾಳೆ ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಮೇ. 2ರಂದು ಪೂರ್ವಹ್ನ 8 ರಿಂದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ 12 ಕಾಯಿ ಗಣಪತಿ ಹವನ,ಆಶ್ಲೇಷಾಬಲಿ, ಶತರುದ್ರಾಭಿಷೇಕ, ಕಲಶಅಭಿಷೇಕ ಹಾಗೂ ಪರಿವಾರ ದೈವಗಳಿಗೆ ಹಾಗೂ ನಾಗದೇವರಿಗೆ ಕಲಶ ಅಭಿಷೇಕ,ತಂಬಿಲ ಸೇವೆಗಳು ನಡೆಯಲಿದೆ .ಎಲ್ಲಾ ಭಕ್ತಭಿಮಾನಿಗಳು ಆಗಮಿಸಿ ಪ್ರಸಾದ ಸ್ವೀಕರಿಸ ಬೇಕಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರು ವಿನಂತಿಸಿಕೊಂಡಿದ್ದಾರೆ.

ನಾಳೆ ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ Read More »

ಅರಂತೋಡು ಮಸೀದಿಯಲ್ಲಿ ವಿಜೃಂಭಣೆಯಿಂದ ನಡೆದ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಹಾಗೂ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ಅವರ ಅನುಸ್ಮರಣೆ

ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಆಶ್ರಯದಲ್ಲಿ 22ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಮತ್ತು ಮರ್‌ಹೂಮ್ ಡಾ ಕೆ.ಎಂ ಶಾಹ್ ಮುಸ್ಲಿಯಾರ್ ಅವರ 7ನೇ ವರ್ಷದ ಅನುಸ್ಮರಣೆಯು ವಿಜೃಂಭಣೆಯಿಂದ ಎ.30ರಂದು ನಡೆಯಿತು. ದಿಕ್ರ್ ಸ್ವಲಾತ್‌ನ ನೇತೃತ್ವವನ್ನು ಅಸೈಯದ್ ಅಲ್ ಹಾಜ್ ಎನ್ ಪಿ ಯಂ ಝೈನುಲ್ ಆಬಿದ್ದೀನ್ ತಂಙಳ್ ವಹಿಸಿ ದುವಾಃ ಆರ್ಶೀವಚನ ಮಾಡಿದರು. ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಆಸೀಫ್ ಆಝ್‌ಹರಿ ಸಮಾರಂಭವನ್ನು ಉದ್ಘಾಟಿಸಿದರು. ಪೇರಡ್ಕ ಮುಹೀದ್ಧೀನ್ ಜಮಾ ಮಸೀದಿ ಖತೀಬರಾದ ಅಹಮ್ಮದ್

ಅರಂತೋಡು ಮಸೀದಿಯಲ್ಲಿ ವಿಜೃಂಭಣೆಯಿಂದ ನಡೆದ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಹಾಗೂ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ಅವರ ಅನುಸ್ಮರಣೆ Read More »

ದಕ್ಷಿಣ ಕನ್ನಡ,ಉಡುಪಿ,ಕಾಸರಗೋಡು ಭಾಗದಲ್ಲಿ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹಗಲು ತೀವ್ರ ಬಿಸಿಲು ಮತ್ತು ಸೆಖೆ ಇರಲಿದ್ದರೂ, ಸಂಜೆ ಹಾಗೂ ರಾತ್ರಿ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡದ ಗಡಿ ಭಾಗಗಳಲ್ಲೂ ಮಳೆ ನಿರೀಕ್ಷಿಸಲಾಗಿದೆ.ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಉತ್ತಮ ಮಳೆ ಮುಂದುವರಿಯಲಿದ್ದು, ಕಂಗಾಲಾಗಿದ್ದ ಜನರಿಗೆ ಬಿಸಿಲಿನಿಂದ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ.

ದಕ್ಷಿಣ ಕನ್ನಡ,ಉಡುಪಿ,ಕಾಸರಗೋಡು ಭಾಗದಲ್ಲಿ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ Read More »

error: Content is protected !!
Scroll to Top